ಬಾಗಲಕೋಟೆ: ಜಿಲ್ಲೆಯಲ್ಲಿನ ಸಾಹಿತಿಗಳು ತಮ್ಮದೆಯಾದ ರೀತಿಯಲ್ಲಿ ಕಾವ್ಯ ಸಂಕಲನ, ಕಥೆಗಳು ಪುಸ್ತಕ ರಚನೆ ಮಾಡಿ ಓದುಗರಿಗೆ ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಾ ಇದ್ದಾರೆ ಅಂತಹ ಸಾಹಿತಿಗಳಿಗೆ ಶಕ್ತಿ ತುಂಬುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಜಿಲ್ಲಾ ಕ. ಸಾ. ಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ತಿಳಿಸಿದರು.
ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಬೀಳಗಿ ರಜತ ಮಹೋತ್ಸವ ೨೦೨೫ ರ ನಿಮಿತ್ಯ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ವನ್ನು ಉದ್ಘಾಟಿಸಿ ಅವರು ಮಾತನಾಡಿ ರಜತ ಮಹೋತ್ಸವ ನಿಮಿತ್ಯ ಕ್ರೀಡೆ, ಸಾಹಿತ್ಯ, ಸಾಂಸ್ಕ್ರತಿಕ , ಸಹಕಾರಿ, ವೈದ್ಯಕೀಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲಾ ಕ್ಷೇತ್ರಗಳನ್ನು ಗುರುತಿಸಿದ್ದು ಎಸ್ ಆರ್ ಪಾಟೀಲ್ ಅವರು ಸಚಿವರಾಗಿದ್ದಾಗ ನಾಡು ನುಡಿಗಾಗಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ, ಎಲ್ಲಾ ರಂಗದಲ್ಲೂ ಯಶಸ್ಸು ಸಾಧಿಸಿರುವ ಸಾಹೇಬರು ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡಿ ಬೀಳಗಿ ತಾಲೂಕನ್ನು ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದಾರೆ, ಅವರು ಇಂತಹ ಯಶಸ್ಸಿನ ಪಯನ ಶುಭಕರವಾಗಿ ಸಾಗಿ ಇನ್ನು ಹೆಚ್ಚಿನ ಶಕ್ತಿ ಅವರಿಗೆ ಬರಲಿ ಎಂದರು.
ಬ್ಯಾಂಕ್ ಅಧ್ಯಕ್ಷರಾದ ಎಸ್ ಆರ್ ಪಾಟೀಲ್ ಅವರು ಮಾತನಾಡಿ ರಾಜಕಾರಣ ಕಲುಷಿತವಾಗುತ್ತಿದ್ದು, ಅಂದು ರಾಜಕಾರಣ ಮಾಡುವವರು ಯಾವುದೇ ಆಶೆ ಇಲ್ಲದೆ ಸಮಾಜ ಸೇವೆ ಮಾಡಲು ಮುಂದೆ ಬರುತ್ತಿದ್ದರು ಆದರೆ ಇಂದು ರಾಜಕಾರಣದಲ್ಲಿ ಯಾವುದೇ ಸಮಾಜದ ಹಿತ ಬಯಸದೇ ಲಾಭಕ್ಕಾಗಿ ರಾಜಕಾರಣ ಮಾಡುವ ಉದ್ಯೋಗ ಮಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಸಾಹಿತಿಗಳು ಖಡ್ಗಕಿಂತ ತಮ್ಮ ಹರಿತವಾದ ಲೇಖನಿಯಿಂದ ಸಮಾಜದಲ್ಲಿ ದಿನ ನಿತ್ಯ ನಡೆಯುತ್ತಿರುವ ಅನೀತಿ ಅನಾಚಾರ, ಅತ್ಯಾಚಾರ, ಭಯೋತ್ಪಾದನೆ, ಭ್ರಷ್ಟಾಚಾರವನ್ನು ಮಾಡುವ ಜನಪ್ರತಿನಿಧಿಗಳ, ಅಧಿಕಾರಿಗಳ ತಪ್ಪುಗಳನ್ನು ತಿದ್ದಿ ಹಾಗೂ ಸಮಾಜದ ಓರೆ ಕೋರೆಗಳನ್ನು ತಿದ್ದುವ ಶಕ್ತಿ ಸಾಹಿತಿಗಳಲ್ಲಿ ಇದ್ದು ಅದನ್ನು ಸಾಹಿತಿಗಳು ಸದುಪಯೋಗಪಡಿಸಿಕೊಂಡು ಸಮಾಜದ ಸ್ವಾಸ್ಥ ಕಾಪಾಡಬೇಕೆಂದು ವಿನಂತಿಸಿಕೊಂಡರು.
ರಾಜಕಾರಣಿಗಳು,ರ‍್ಮಾಧಿಕಾರಿಗಳು, ಸಾಹಿತಿಗಳು, ಸಮಾಜವನ್ನು ಸುಧಾರಣೆ ಮಾಡುವದನ್ನು ಬಿಟ್ಟು ಕಲುಷಿತ ವಾತಾವರಣ ಸೃಷ್ಟಿಸಿದ್ದು ಕಂಡರೆ ಪ್ರಜೆಗಳು ಅವರಿಗೆ ಚಾಟಿ ಏಟು ನೀಡಿ ಅವರೆಲ್ಲರನ್ನು ಸರಿದಾರಿಗೆ ತರಬೇಕಾಗಿದೆ.
- ಡಾ.ಎಂ.ಬಿ.ರೇವಡಿಗಾರ. ಸಾಹಿತಿಗಳು ಬಾಗಲಕೋಟೆ.
ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಲೇಖಕಿ ಡಾ.ಶಾರದಾ ಮುಳ್ಳೂರ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಲ್ ಬಿ ಕರ‍್ತುಕೋಟಿ, ಉಪ ವ್ಯವಸ್ಥಾಪಕ ಜಿ.ಎಸ್.ಬನ್ನಟ್ಡಿ, ಹಿರಿಯರಾದ ರಾಜೇಂದ್ರ ಬಾರಕೇರ, ಬೀಳಗಿ ಕಸಾಪ ತಾಲೂಕಾ ಅಧ್ಯಕ್ಷ ಗುರುರಾಜ ಲೂತಿ, ಶಿಕ್ಷಕ ಸಂಗಮೇಶ ಪಾನಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
- ಕರುನಾಡ ಕಂದ
