ಕೊಪ್ಪಳ ಜಿಲ್ಲೆಯ ಕುಕನೂರ ಪಟ್ಟಣದಲ್ಲಿ ಎ.ಪಿ.ಎಮ್.ಸಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಬಿಸಿಯೂಟ ಸವಿದು ಇಂದಿರಾ ಕ್ಯಾಂಟೀನ್ ಸೌಲಭ್ಯ ವನ್ನು ಬಡ ಕೂಲಿಕಾರರು, ವಿದ್ಯಾರ್ಥಿಗಳು ನೌಕರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಹಿಂದುಳಿದ ವರ್ಗಗಳ ಇಲಾಖೆಯಡಿ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಪ್ರಥಮ ಬಾರಿಗೆ 20 ವಸತಿ ನಿಲಯಗಳು ಸ್ವಂತ ಕಟ್ಟಡದಲ್ಲಿ ಪ್ರಾರಂಭವಾಗಿರುವುದು ತಾಲೂಕಿನ ಜನರಿಗೆ ಹೆಮ್ಮೆ, ಅದರಂತೆ ರಾಷ್ಟ್ರೀಯ ಹೆದ್ದಾರಿ, ಗದಗ ವಾಡಿ ರೈಲು ಯೋಜನೆ ಜನ ಸಾಮಾನ್ಯರ ಆರ್ಥಿಕ ಚಟುವಟಿಕೆಗಳು ಸುಧಾರಣೆಯಾಗಲು ಸಾಧ್ಯ ಎಂದರು.
ಅದರಂತೆ ತಾಲೂಕಿಗೆ ನರ್ಸಿಂಗ್ ಕಾಲೇಜ್ ಇದೇ ವರ್ಷದಿಂದ ಪ್ರಾರಂಭವಾಗಲಿದೆ. ಅದೇ ರೀತಿ ನೂತನ ತಾಲೂಕ ಕಂದಾಯ ಕಟ್ಟಡ ಬುದ್ದ ಬಸವ ಅಂಬೇಡ್ಕರ್ ಭವನ , ಕುಕನೂರ ತಾಲೂಕಿಗೆ JMFC ಕೋರ್ಟ್ ಮಂಜೂರಾಗಿದೆ. ತಾಲೂಕ ಆಸ್ಪತ್ರೆ ಸಹ ಜಾರಿಯಾದ್ದು ಈ ಎಲ್ಲಾ ಕೆಲಸಗಳು ಕರ್ನಾಟಕ ಸರ್ಕಾರದಿಂದ ಆಗಿರುವುದು ಹೆಮ್ಮೆಯ ಕೆಲಸ ಎಂದರು.
ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಅನುಷ್ಠಾನ ಇಲಾಖೆ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಾಣೇಶ, ಇಒ ಸಂತೋಷ ಬಿರಾದರ, ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗವೇಣಿ, ಶಿವಶಂಕರ್ ಕರಡಕಲ್, ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಸಂಗಮೇಶ ಗುತ್ತಿ, ಸುದೀರ್ ಕೊರ್ಲಳ್ಳಿ, ಮುಖಂಡರಾದ ಸತ್ಯನಾರಾಯಣ ಹರಪನಹಳ್ಳಿ, ಖಾಸಿಂಸಾಬ ತಳಕಲ್, ಹನುಮಂತಗೌಡ ಚೆಂಡೂರ್, ಮಂಜುನಾಥ ಕಡೇಮನಿ, ರಾಮಣ್ಣ ಬಂಕದಮನಿ, ವೀರಯ್ಯ ತೊಂಟದಾರ್ಯಮಠ, ಗಗನ್ ನೋಟಗಾರ, ಸಿರಾಜ್ ಕರಮುಡಿ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ
