ರಾಯಚೂರು/ಸಿಂಧನೂರು :ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಲ್ಲದಗುಡ್ಡ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮತ ಎಣಿಕೆ ಮುಕ್ತಾಯವಾಗಿದ್ದು ಅಭ್ಯರ್ಥಿ ಹನುಮೇಶ ಗೋಡಿನಾಳ ಗೆಲುವು ಸಾಧಿಸಿದ್ದಾರೆ ಎಂದು ತಹಶೀಲ್ದಾರ ಶೃತಿ ತಿಳಿಸಿದರು.
ಅವರು ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಹಿಂದಿನ ಸದಸ್ಯರಾದ ತ್ರಿನಾಥ ತಂ. ಸತ್ಯನಾರಾಯಣ ಇವರು ಅಕಾಲಿಕವಾಗಿ ನಿಧನ ಹೊಂದಿದ ಪ್ರಯುಕ್ತ ಸಾಮಾನ್ಯ ಮೀಸಲು ಸ್ಥಾನಕ್ಕೆ ಹೊಸ ಸದಸ್ಯರ ಆಯ್ಕೆಗಾಗಿ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಶ್ರೀ ಹನುಮೇಶ ಗೋಡಿನಾಳ ತಂದೆ ಶೇಖರಪ್ಪ ಮತ್ತು ಕೆ.ವಿರುಪಾಕ್ಷಿ ತಂದೆ ಕೆ.ವೀರಪ್ಪ ಸ್ಪರ್ಧಿಸಿದ್ದರು.
ಚಲಾವಣೆಯಾದ ಒಟ್ಟು 479 ಮತಗಳ ಪೈಕಿ, ಶ್ರೀ ಹನುಮೇಶ ಗೋಡಿನಾಳ ಅವರು 222 ಮತಗಳನ್ನು ಮತ್ತು ಕೆ.ವಿರುಪಾಕ್ಷಿ ಅವರು 221 ಮತಗಳನ್ನು ಪಡೆದರೆ, 36-ಮತಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ವೀರೇಶ ಗೋನವಾರ, ಸಹಾಯಕ ಚುನಾವಣಾಧಿಕಾರಿ ರಾಮದಾಸ ತಿಳಿಸಿದರು.
ಮತ ಎಣಿಕೆ : ಇಂದು ಬೆಳಿಗ್ಗೆ 8.10ರಿಂದ ಆರಂಭವಾದ ಮತ ಎಣಿಕೆ ಕಾರ್ಯ ಬೆಳಿಗ್ಗೆ 10.50ಕ್ಕೆ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ಚಂದ್ರಶೇಖರ ಹೆಚ್, ಚುನಾವಣಾ ಶಿರಸ್ತೇದಾರ ಅಂಬಾದಾಸ್ ಸೂರ್ಯವಂಶಿ, ಎಣಿಕೆ ಮೇಲ್ವಿಚಾರಕ ಕಂದಾಯ ಇಲಾಖೆಯ ಉಪ ತಹಶೀಲ್ದಾರ ಶಿವಯೋಗೆಪ್ಪ ಗೌಡ, ಸಹಾಯಕರಾಗಿ ಗ್ರಾಮ ಆಡಳಿತಾಧಿಕಾರಿಗಳಾದ ಹನುಮೇಶ, ಮಲ್ಲಿಕಾರ್ಜುನ, ಪ್ರದಸ ಬಸವರಾಜ ಬಸರಕೋಡ, ಚುನಾವಣಾ ಶಾಖೆಯ ವೀರೇಶ ಸೇರಿದಂತೆ ಇತರರು ಹಾಜರಿದ್ದರು.
- ಕರುನಾಡ ಕಂದ



















