
ಬಳ್ಳಾರಿ / ಕಂಪ್ಲಿ : ಕಟ್ಟಡ ಕಾರ್ಮಿಕರಿಗೆ ಬದುಕನ್ನು ರಕ್ಷಿಸಿ ಜೊತೆಗೆ ಸರ್ಕಾರದ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು.
ಪಟ್ಟಣದ ಸೋಮಪ್ಪ ದೇವಸ್ಥಾನ ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಶನ್ ಕಂಪ್ಲಿ ತಾಲೂಕು ಸಮಿತಿಯಿಂದ ಏರ್ಪಡಿಸಿದ ಕಟ್ಟಡ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಕಾರ್ಮಿಕರ ಅವಿರತ ಹೋರಾಟವೇ ತ್ಯಾಗ ಬಲಿದಾನಗಳಿಂದ ಪ್ರತ್ಯೇಕ ಕಾಯ್ದೆ ಜಾರಿಯಾಗಿದೆ ಕಾರ್ಮಿಕರಿಲ್ಲದೆ ಕಟ್ಟಡಗಳು ನಿರ್ಮಾಣವಾಗುವುದಿಲ್ಲ ಎರಡು ವರ್ಷದಿಂದ ದನ ಸಹಾಯವಿಲ್ಲದೆ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದೇವೆ ಕಂಪ್ಲಿಯಲ್ಲಿ ನಾಲ್ಕು ವರ್ಷದಿಂದ ಕಾರ್ಮಿಕರ ಕಚೇರಿಯಿಂದ ಸರ್ಕಾರಿ ಸೌಲಭ್ಯಗಳಾದ ಶೈಕ್ಷಣಿಕ, ಮದುವೆ ಸಹಾಯಧನ, ಅಂತ್ಯಕ್ರಿಯೆ ಸಹಾಯಧನ, ವೈದ್ಯಕೀಯ ವೆಚ್ಚ , ಹೆರಿಗೆ ಸೌಲಭ್ಯ, ಬಾಂಡ್ ಹಣ ಮಂಜೂರು ಆದೇಶ ಪತ್ರ ಯಾವುದೇ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಇತ್ತಕಡೆ ನಿವೇಶನವೂ ಇಲ್ಲ ಯಾವುದೇ ಸೌಲಭ್ಯವು ಒದಗಿಸಿಲ್ಲ ಅಸಂಘಟಿತ ಕಾರ್ಮಿಕರಾಗಿದ್ದು ಬದುಕು ನಡೆಸುತ್ತಿರುವುದು ನೋವಿನ ಸಂಗತಿಯಾಗಿದೆ ಸರ್ಕಾರ ಕಟ್ಟಡ ಕಾರ್ಮಿಕರ ಬಾಕಿ ಇರುವ ಎಲ್ಲಾ ಸೌಲಭ್ಯಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಜೆ. ಸತ್ಯಬಾಬು ಮಾತನಾಡಿ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದು ಜೊತೆಗೆ ಕಾರ್ಮಿಕರಿಗೆ ಸ್ವಂತ ನಿವೇಶನ ಇಲ್ಲದೆ ಸಮಾಜದಲ್ಲಿ ಅತ್ಯಂತ ಬಡತನದಲ್ಲಿ ಜೀವನ ಮಾಡುತ್ತಿದ್ದು ಸರ್ಕಾರ ಶೀಘ್ರದಲ್ಲಿಯೇ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಕಾರ್ಮಿಕರೆಲ್ಲ ಸೇರಿ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೂ ಮುಂಚೆ ಕಟ್ಟಡ ಕಾರ್ಮಿಕರ ಸಮಾವೇಶ ಮೆರವಣಿಗೆ ಉದ್ಭವ ಗಣಪತಿ ಪ್ರಮುಖ ರಸ್ತೆ ಮೂಲಕ ಸೋಪ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಐ. ಹೊನ್ನೂರ ಸಾಬ್, ಗೌರವಾಧ್ಯಕ್ಷ ಬಂಡಿ ಬಸವರಾಜ್, ಪ್ರಧಾನ ಕಾರ್ಯದರ್ಶಿ ಆರ್. ನಾಗರಾಜ, ಖಜಾಂಚಿ ವಿ. ದೇವಣ್ಣ, ಕಟ್ಟಡ ಕಾರ್ಮಿಕ ಮಹಿಳಾ ವಿಭಾಗದ ಹೆಚ್. ಹೊನ್ನಮ್ಮ , ಸರಸ್ವತಿ , ಸುವರ್ಣಮ್ಮ , ಅಂಜಿನಮ್ಮ , ಲಕ್ಷ್ಮಮ್ಮ ಸೇರಿದಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಶನ್ ಪದಾಧಿಕಾರಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















