
ಯಾದಗಿರಿ/ಗುರುಮಠಕಲ್: ನಮ್ಮ ಗುರುಮಠಕಲ್ ತಾಲೂಕಿನ ಕಾರ ಹುಣ್ಣಿಮೆ ತುಂಬಾ ವಿಶೇಷ ನೋಡ್ರಿ, ಬಹಳ ವರ್ಷಗಳಿಂದ ಕಾರ ಹುಣ್ಣಿಮೆ ಬಂತು ಅಂದ್ರೆ ನಮ್ಮ ರೈತರಿಗೆ ಎಲ್ಲಿಲ್ಲದ ಖುಷಿ, ಅದರಲ್ಲೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ರೈತರು, ತಮ್ಮ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾ ಬಂದಿದ್ದಾರೆ.
ಕಾಕಲವರ ಸಂಸ್ಥಾನದ ರಾಜಾ ಲಕ್ಷ್ಮಣಪ್ಪ ದೊರೆ ಸಂಸ್ಥಾನದ ಎತ್ತುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಾಡಿಕೆ, ನಾರಾಯಣಪುರ ಕಮಾನಿನ ಮುಖಾಂತರ ಮೂರು ಬಾರಿ ಸಂಚರಿಸಿದ ನಂತರ ಕಮಾನಿನ ಒಂದು ಕಡೆಯಿಂದ ಇನ್ನೊಂದು ಕಡೆ ಹಗ್ಗ ಬೀಸಲಾಗುತ್ತೆ ಎರಡು ಪ್ರಯತ್ನದ ನಂತರ ಹಗ್ಗ ಬಿದ್ದ ನಂತರ ಮಾವಿನ ತೋರಣ ಕಡೆಯಲಾಗುತ್ತೆ.
ನಮ್ಮ ಜನ ಬೆಳಿಗ್ಗೆಯಿಂದಲೇ ಎತ್ತುಗಳ ಮೈ ತೊಳೆಯುವದು, ಅವುಗಳಿಗೆ ಬಣ್ಣ ಹಚ್ಚಿ ಅವುಗಳ ಕೊರಳಲ್ಲಿ ಗೆಜ್ಜೆ ಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕಿ ಭರ್ಜರಿಯಾಗಿ ತಯಾರು ಮಾಡುತ್ತಾರೆ. ಹೋಳಿಗೆ ಸೇರಿದಂತೆ ಬಗೆಬಗೆಯ ಸಿಹಿ ಅಡುಗೆಯನ್ನು ಮನೆಯಲ್ಲಿ ಮಾಡಿ ತಮ್ಮ ಮನೆಯಲ್ಲಿರುವ ಎತ್ತುಗಳಿಗೆ ಹೋಳಿಗೆ ಸೇರಿದಂತೆ ಸಿಹಿ ತಿನಿಸುಗಳನ್ನು ತಿನ್ನಿಸಿ, ನಂತರ ಮುಖ್ಯ ಬೀದಿಗಳಲ್ಲಿ ತಮಟೆ ವಾದ್ಯಗಳ ಮುಖಾಂತರ ಮೆರವಣಿಗೆ ಮಾಡಿ ಖುಷಿಪಟ್ಟರು.
ವರದಿ: ಜಗದೀಶ್ ಕುಮಾರ್ ಭೂಮಾ



















