ಪುರಸಭೆ ಕಾರ್ಯಾಲಯ ಗುರುಮಠಕಲ್ನಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತರ ಸ್ಥಾನಕ್ಕೆ ಗೌರವ ಧನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ವಿಶೇಷ ಚೇತನರಿಂದ ಅರ್ಜಿ ಆಹ್ವಾನ.
ಯಾದಗಿರಿ/ಗುರುಮಠಕಲ್: ಗುರುಮಠಕಲ್ ಪುರಸಭೆ ಕಾರ್ಯಾಲಯದಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತರ ಸ್ಥಾನಕ್ಕೆ ತಾತ್ಕಾಲಿಕ ಗೌರವ ಧನ ಆಧಾರದ ಮೇಲೆ ಕಾರ್ಯನಿರ್ವಸಲು ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಿಲಾಗಿದೆ.
ಆಸಕ್ತಿಯುಳ್ಳವರು ದಿ:26.06.2025 ಸಮಯ ಸಾಯಂಕಾಲ 05:30 ರೊಳಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಠಡಿ ಸಂಖ್ಯೆ: ಬಿ೧೧, ಬಿ12 ನೆಲಮಹಡಿ ಜಿಲ್ಲಾಡಳಿತ ಭವನ ಯಾದಗಿರಿಯಲ್ಲಿ ಆಸಕ್ತರು ಅರ್ಜಿ ಸಲ್ಲಿಸಲು ಕೊರಲಾಗಿದೆ.
ವಯಸ್ಸಿನ ಮಿತಿ – 45 ವರ್ಷ ಇರಬೇಕು.
ಅರ್ಜಿ ಪತ್ರದೊಂದಿಗೆ ಸಲ್ಲಿಸಬೇಕಾದ ದಾಖಲೆಗಳು.
- ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ.
- ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಮತ್ತು ಶಾಲಾ ವರ್ಗಾವಣಾ ಪ್ರಮಾಣ ಪತ್ರ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ವಿಕಲಚೇತನ ಗುರುತಿನ ಪ್ರಮಾಣ ಪತ್ರ.
- 2 ಭಾವಚಿತ್ರ.
ವರದಿ: ಜಗದೀಶ್ ಕುಮಾರ್ ಭೂಮಾ



















