ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೊರವಾರ ದೇವಸ್ಥಾನದ ಸಿಸಿ ರಸ್ತೆ ಕಾಮಗಾರಿಗೆ ಅನುಮತಿ ಪತ್ರ ನೀಡಲು ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಎಸ್ ಡಿ ಎ ಶರಣಪ್ಪ ನಿನ್ನೆ ಕಲಬುರಗಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಕಾಳಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕರ್ನಾಟಕ ಲೋಕಾಯುಕ್ತ ಎಸ್. ಪಿ. ಬಿ ಕೆ ಉಮೇಶ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಕಾರ್ಯ ಶೋಧ ನಡೆಸಿದರು. ತಹಶೀಲ್ದಾರ್ ಕಚೇರಿಯ ಎಲ್ಲಾ ಕಡತಗಳು ಪರಿಶೀಲನೆ ಮತ್ತು ಕಚೇರಿಯ ಸಿಸಿಟಿವಿ ಫೋಟೋಗಳು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರಾಜಶೇಖರ್ ಹಳಗೋದಿ ಸಿಬ್ಬಂದಿಗಳಾದ ಬಸವರಾಜ, ಮೈನುದ್ದೀನ್, ಮಲ್ಲಿನಾಥ ಸೇರಿದಂತೆ ಇತರರು ಇದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















