ಯಾದಗಿರಿ/ಗುರುಮಠಕಲ್: ತಾಲೂಕಿನ ಪಸಪೂಲ್ ತಾಂಡಾದಲ್ಲಿ ಮೊನ್ನೆ ದಿ:17-06-2025 ರಂದು ಕರ್ತವ್ಯ ನಿರತ ಅಬಕಾರಿ ಪೇದೆ ಮತ್ತು ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಇಂದು ಸಂತೋಷ ನೀರೆಟಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಗುರುಮಠಕಲ್ ತಾಲೂಕಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪ ತಹಸೀಲ್ದಾರ್ ನರಸಿಂಹಸ್ವಾಮಿಯವರಿಗೆ ಮನವಿ ನೀಡಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪಸಪೂಲ ತಾಂಡಾದಲ್ಲಿ ಕರ್ತವ್ಯನಿರತ ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಪಸಪೂಲ ತಾಂಡಾದ ಕೆಲವು ಗೂಂಡಾಗಳು ಸೇರಿಕೊಂಡು ಅಬಕಾರಿ ಪೇದೆಯಾದ ಶ್ರೀ ಪರಶುರಾಮ ರಾಠೋಡ್ ಮತ್ತು ಸಹಾಯಕ ಗೃಹ ರಕ್ಷಕ ಸಿಬ್ಬಂದಿ ಭೀಮರಾಯ ಇವರ ಮೇಲೆ ಹಲ್ಲೆ ಮಾಡಿ ಗೃಹ ಬಂಧನದಲ್ಲಿ ಇಟ್ಟು ಅವರಿಂದ ಫೋನ್ ಮತ್ತು ಸರಕಾರಿ ದ್ವೀ-ಚಕ್ರ ವಾಹನವನ್ನು ಕಿತ್ತು ಕೊಂಡಿರುವ ಅಮಾನವೀಯ ಘಟನೆ ಜರುಗಿದೆ.
ಈ ಘಟನೆ ಕುರಿತಾಗಿ ಮಾತನಾಡಿದ ಸಂತೋಷ ನೀರೆಟಿ ಹಲ್ಲೆ ಮಾಡಿ ಅವರಿಗೆ ಇನ್ನೊಂದು ಸಲ ನಮ್ಮ ಪಸಪೂಲ ತಾಂಡಾಕ್ಕೆ ಬಂದು ಕಳ್ಳ ಬಟ್ಟೆ ಸರಾಯಿ ತಪಾಸಣೆ ಮಾಡಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಗುಂಡಾ ವರ್ತನೆ ತೋರಿ ಮನಬಂದಂತೆ ಹಲ್ಲೆ ಮಾಡಿರುವುದು ಖಂಡನೀಯ ಈ ರೀತಿಯ ವರ್ತನೆಯಿಂದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಯಭೀತರಾಗಿದ್ದಾರೆ ಹಾಗೂ ಸರಕಾರಿ ಸೇವೆ ಸಲ್ಲಿಸಲು ತಾಂಡಾಗಳಿಗೆ ಹೋಗಿ ಕರ್ತವ್ಯ ನಿರ್ವಹಿಸಲು ಹೆದರುತ್ತಿದ್ದಾರೆ. ಇದೇ ರೀತಿಯ ವಾತಾವರಣ ಮುಂದುವರೆದರೆ ಎಲ್ಲಾ ಸರಕಾರಿ ನೌಕರರು ಸುಗಮವಾಗಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತದೆ.
ಹಲ್ಲೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರರನ್ನು ಕೂಡಲೇ ಬಂಧಿಸಿ ಕರ್ತವ್ಯನಿರತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಲು ಮನವಿ ನೀಡಿದರು.
ಈ ಸಂದರ್ಭದಲ್ಲಿ ಗುರುಮಠಕಲ್ ತಾಲೂಕ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಹರೀಶ್ ಕುಮಾರ್, ಪ್ರಶಾಂತ್, ವೆಂಕಟಪ್ಪ, ಶ್ರೀನಾಥ, ಶಿವಕುಮಾರ, ಗಣೇಶ್, ವಿಜಯ ಪವಾರ್, ಶಾರದಾ, ರೇಖಾ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ.



















