ಶಿವಮೊಗ್ಗ :ನಮ್ಮ ನಿಮ್ಮೆಲ್ಲರ ಚಿರಪರಿಚಿತ, ಅನೇಕರಿಗೆ ನೆರಳು ನೀಡಿದ , ವಾಹನಗಳ ನಿಲುಗಡೆಗೆ ಆಶ್ರಯ ನೀಡಿದ ಗಡಿಕಲ್ ವೃತ್ತದ ದೂಪದ ಹೆಮ್ಮರ ಇಂದು ನಮ್ಮನ್ನೆಲ್ಲಾ ಬಿಟ್ಟು ಇಹಲೋಕ ತ್ಯಜಿಸಿದೆ, ಗಡಿಕಲ್ ವೃತ್ತಕ್ಕೆ ಒಂದು ಮೆರಗು ತಂದ ವೃಕ್ಷ , ಕೊಪ್ಪ ತೀರ್ಥಹಳ್ಳಿ ಕಡೆ ಹೋಗುವ ಪ್ರಯಾಣಿಕರ ಬಸ್ ನಿಲ್ದಾಣದಂತೆ, ಅನೇಕ ಶಾಲಾ ಮಕ್ಕಳ ತಂಗುದಾಣ, ನಮ್ಮಂತ ಅನೇಕ ಯುವಕರ ಸಂಜೆಯ ಮೀಟಿಂಗ್ ಹಾಲ್, ಪೊಲೀಸ್ ನವರ ಚೆಕ್ ಪೋಸ್ಟ್ ಹಾಕಿದಾಗ ಅವರಿಗೆ ನೆರವಾಗಿ ತಂಪಾದ ಗಾಳಿ ನೆರಳು ನೀಡಿದ ಮರ ಇಂದು ನೆನಪು ಮಾತ್ರ, ಊರಿನ ಅನೇಕ ರಾಜಕೀಯ ಸಾಮಾಜಿಕ, ಕೃಷಿ ಸಂಬಂಧಿಸಿದ ವಿಷಯಗಳನ್ನು ಆಲಿಸಿಕೊಂಡು ಯಾರಿಗೂ ಹೇಳದೆ ತನ್ನ ಒಡಲಿನಲ್ಲಿ ಅದುಮಿಟ್ಟುಕೊಂಡ ಹೆಮ್ಮರವಿದು. ತನ್ನ ಆಯಸ್ಸು ಮುಗಿಸಿ ಇಂದು ನಮ್ಮಿಂದ ದೂರವಾಗಿದೆ, ಗಡಿಕಲ್ ಸರ್ಕಲ್ ತನ್ನ ಮೆರುಗನ್ನು ಕಳೆದುಕೊಂಡಿದೆ ವಯೋಸಹಜ ಸಾವಿರಬಹುದು, ಆತ್ಮಕ್ಕೆ ಶಾಂತಿ ಸಿಗಲಿ…
ವರದಿ ಪ್ರಸಾದ್ ಎಚ್. ಬಿ



















