ವಿಜಯಪುರ/ ಆಲಮೇಲ :ಕಬ್ಬು ಕಟಾವು ಮತ್ತು ಸಾಗಾಣಿಕೆದಾರರ ಸಂಘದ ವತಿಯಿಂದ ಆಲಮೇಲ್ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿ ಗೋಷ್ಠಿ ನಡೆಯಿತು.
ಈ ಸುದ್ದಿಗೋಷ್ಠಿಯಲ್ಲಿ ಕಬ್ಬು ಕಟ್ಟಾವು ಮತ್ತು ಸಾಗಾಣಿಕೆದಾರರ ಸಂಘದ ಅಧ್ಯಕ್ಷರ ಶಶಿಧರ ನಾಯ್ಕೋಡಿ ಮಾತನಾಡಿ ಕೆ ಪಿ ಆರ್ ಸಕ್ಕರೆ ಕಾರ್ಖಾನೆಯ ಮಾಲೀಕರು ಈ ವರ್ಷ ಅನೇಕ ಷರತ್ತುಗಳನ್ನು ಹಾಕಿದ್ದು ಈ ಎಲ್ಲಾ ಶರತ್ತುಗಳಿಗೆ ವಾಹನ ಮಾಲೀಕರ ಒಪ್ಪಿಗೆ ಇರುವುದಿಲ್ಲ.
ಕೆ ಪಿ ಆರ್ ಸಕ್ಕರೆ ಕಾರ್ಖಾನೆಯ ಆಡಳಿತ ಅಧಿಕಾರಿಗಳು ಮತ್ತು ಮಾಲೀಕರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಬ್ಬು ಸಾಗಾಣಿಕೆ ಮಾಡುತ್ತಿರುವ ಟ್ಯಾಕ್ಟರ್ ಮಾಲೀಕರಿಗೆ ಮಲತಾಯಿ ಧೋರಣೆ ತೋರುತ್ತಿದ್ದು ಸಕ್ಕರೆ ಕಾರ್ಖಾನೆಯ ಮಾಲೀಕರು ಹಾಗೂ ಆಡಳಿತ ಅಧಿಕಾರಿಗಳ ಶರತ್ತುಗಳು ಸಮಂಜಸವಲ್ಲ 18 ಮತ್ತು 19ನೇ ಕಾಲಮಿನ ಶರತ್ತುಗಳಿಗೆ ಒಪ್ಪಿಗೆ ಇರುವುದಿಲ್ಲ.
ಎಲ್ಲಾ ಟ್ರ್ಯಾಕ್ಟರಿ ಮಾಲೀಕರು ಸೇರಿ ದಿನಾಂಕ 23 ರಂದು ಕಾರ್ಖಾನೆ ಆವರಣದಲ್ಲಿ ಅನಿರ್ಧಿಷ್ಟಕಾಲ ಧರಣಿ ಆರಂಭಿಸುತ್ತೇವೆ ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆದಾರರ ಸಂಘದ ಉಪಾಧ್ಯಕ್ಷರಾದ ಮಾಂತೇಶ್ ಕತ್ತಿ, ಕಾರ್ಯದರ್ಶಿಗಳಾದ ಮಹೇಶ್ ಹುನಳ್ಳಿ, ಸದಸ್ಯರಾದ ರಾಜು ಮೇತ್ರಿ ಹಾಗೂ ಗೋಪಾಲ್ ಬಿರಾದಾರ್ ಮತ್ತು ಸ್ಥಳೀಯ ಟ್ರ್ಯಾಕ್ಟರ್ ಮಾಲೀಕರು ಉಪಸ್ಥಿತರಿದ್ದರು.
ವರದಿ. ಹಣಮಂತ ಚ. ಕಟಬರ್



















