ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಲಾವಿದರ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಚಿಸಿದ ಮಾಜಿ ಶಾಸಕ ಎಸ್ ಜಿ ನಂಜಯ್ಯನಮಠ

ಬಾಗಲಕೋಟೆ ಜಿಲ್ಲೆಯ ಸರ್ವ ಕಲಾವಿದರ ಪ್ರಾಥಮಿಕ ಕುಂದು ಕೊರತೆಗಳನ್ನು ತೀವ್ರಗತಿಯಲ್ಲಿ ಸರಿಪಡಿಸಬೇಕೆಂದು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮಾಜಿ ಶಾಸಕ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್. ಜಿ. ನಂಜಯ್ಯನಮಠ ಸೂಚಿಸಿದರು. ಅವರು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ನಿಯೋಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಭವನದ ಎದುರು ಜಮಾಯಿಸಿಕೊಂಡು ಹಲವು ಪ್ರಾಥಮಿಕ ಸಮಸ್ಯೆಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಪವಿತ್ರ ಜಕ್ಕಪ್ಪನವರ್ ಮಾತನಾಡಿ ಮಾಜಿ ಶಾಸಕ ನಂಜಯನ ಮಠ ಹಾಗೂ ಸಹಾಯಕ ನಿರ್ದೇಶಕ ಕರಣ ಕುಮಾರ ಜೈನಾಪುರ ಅವರ ಗಮನಕ್ಕೆ ತರಲು ಪ್ರಯತ್ನಿಸಿದರು. ಹಲವು ವರ್ಷಗಳಿಂದ ಇಲ್ಲಿಯವರೆಗೆ ನಡೆದ ಹಲವು ನ್ಯೂನತೆಗಳನ್ನು ಸರಿಪಡಿಸಿ ಸೇವೆ ಸಲ್ಲಿಸಿದ ಕಲಾವಿದರ ಸಮಸ್ಯೆಗಳನ್ನು ಪರಿಶೀಲಿಸಿ ಕಲಾವಿದರಿಗೆ ತೀವ್ರ ಗತಿಯಲ್ಲಿ ನ್ಯಾಯವನ್ನು ಒದಗಿಸಿಕೊಡಬೇಕೆಂದು ಕೇಳಿಕೊಂಡು ಮುಂದುವರೆದು ಮಾತನಾಡಿದ ನಂಜಯ್ಯನ ಮಠ ಅವರು ಮಾಶಾಸನ ಮಂಜೂರಾತಿಯಲ್ಲಿ ವಿಳಂಬವಾಗಿರುವ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಅರ್ಹ ಕಲಾವಿದರಿಗೆ ಶೀಘ್ರ ಮಾಶಾಸನ ಒದಗಿಸಿಕೊಡಲು ಜಾನಪದ ಅಕಾಡೆಮಿಗೆ ಶಿಫಾರಸ್ಸು ಪತ್ರ ನೀಡಲು ಸಾಹೇಬರು ನಿರ್ದೇಶಕರಿಗೆ ಸೂಚಿಸಿದ ಅವರು ಮಾಶಾಸನ ಫಾರ್ಮಗಳು ಬಂದ ತಕ್ಷಣ ಕಲಾವಿದರಿಗೆ ಮಾಹಿತಿ ನೀಡಿ ಮಾಶಾಸನ ಫಾರ್ಮಗಳನ್ನು ಒದಗಿಸಲು ಹೇಳಿದರು. ಮುಖಂಡರಾದ ಎಲ್ಲಪ್ಪ ಪೂಜಾರ್, ಶಂಕರಪ್ಪ ತಂಬಾಕದ, ರಾಮಪ್ಪ ಗಲಗಲಿ, ನಾರಾಯಣ ಪತ್ತಾರ್, ಹೊಳೆ ಬಸಪ್ಪ ಬಾದಾಮಿ, ಮಲ್ಲಮ್ಮ ಶಿರೋಳ, ಬಸಮ್ಮ ಭಗವತಿ, ಪರಯ್ಯ ಮಠಪತಿ, ಲಕ್ಕವ್ವ ಕಪರಟ್ಟಿ, ಶಿವಲಿಂಗವ್ವ ಗಸ್ತಿ, ವಿಠಲ ತಳವಾರ ಸೇರಿದಂತೆ ನೂರಾರು ಕಲಾವಿದರು ಪಾಲ್ಗೊಂಡಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!