ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಿ.ಜೆ. ಸೌಂಡ್ ಬಗ್ಗೆ ಎಚ್ಚರವಿರಲಿ…

ಅನೇಕರು ಡಿಜೆ ಸೌಂಡ್ ಸಿಸ್ಟಮ್ ನಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ
ಘಟನೆಗಳು ದಿನನಿತ್ಯ ಅಲ್ಲಲ್ಲಿ ಕೇಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಈ ದುರಂತವನ್ನು ಹೇಳತೀರದು
ಹೀಗೆ ಯುವಕರು ಹೃದಯಾಘಾತದಿಂದ ಕುಸಿದು ಬಿದ್ದು ಸಾಯುವುದು ಅತ್ಯಂತ ಸಾಮಾನ್ಯವಾಗುತ್ತಿದೆ.
ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವಂತವರಿಗೆ ಇದು ಸಾವಿನ ದವಡೆಗೆ ತೆಗೆದುಕೊಂಡು ಹೋಗುತ್ತದೆ. ಆದರೂ ಸಹ
ಅನೇಕರು ಎಚ್ಚರಿಸಿದರು ಇಂದಿನ ಯುವಪೀಳಿಗೆ ಯಾರ ಮಾತೂ ಕೇಳದೇ ಇರುವುದು ದುರಂತವೇ ಎನ್ನಬಹುದು.
ಎಚ್ಚರಿಸುತ್ತಿದ್ದಾರೆ. ಸರ್ಕಾರಕ್ಕೂ ಈ ಸಾವುಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪತ್ರವನೂ ಬರೆದಿದ್ದಾರೆ. ಫೇಸ್‌ಬುಕ್ ಗೆಳೆಯ, ಪತ್ರಕರ್ತ Ashik Mulki ದುಬೈಯಲ್ಲಿ ತಮ್ಮ ಗೆಳೆಯ 25 ವರ್ಷದ ಯುವಕ ಸಫ್ವಾನ್ ಸಾವಿನ ಬಗ್ಗೆ ನಿನ್ನೆಯಷ್ಟೇ ಬರೆದಿದ್ದಾರೆ. ಗೆಳೆಯ Om Ganesh Uppunda ಕೂಡ ತಮ್ಮ ಪರಿಚಯದ 32 ವರ್ಷ ಪ್ರಾಯದ ಯುವಕ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನಿತಿನ್ ಮಹಾಲೆ ಲೋ ಬಿಪಿಯ ಕಾರಣ ಮೃತಪಟ್ಟ ಬಗ್ಗೆ ನೋವಿನಿಂದ ಬರೆದಿದ್ದಾರೆ.

ಈ ಸಾವುಗಳಿಗೆ ಜೀವನಶೈಲಿ, ಆಹಾರಶೈಲಿ ಅಥವಾ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಕಾರಣವಿರಬಹುದು. ಕೊರೋನಾ ಲಸಿಕೆಗಳ ಪರಿಣಾಮ ಇಂತಹ ಸಾವುಗಳು ಸಂಭವಿಸುತ್ತಿದೆಯೆ ಎಂಬುದೂ ಸಹ ಇನ್ನೊಂದು ಆತಂಕದ ವಿಚಾರ. ಈ ಸಾವುಗಳನ್ನು ತಡೆಗಟ್ಟಲು ಸಾಧ್ಯವಿತ್ತೆ? ಹಾಗಾದರೆ ನಾವು ಏನು ಮಾಡಬೇಕಿತ್ತು? ಸರ್ಕಾರಗಳ ಜವಾಬ್ದಾರಿ ಏನು? ನಾಗರಿಕ ಸಮಾಜದ ಹೊಣೆಗಾರಿಕೆ ಏನು? ಸ್ವತಃ ಸಾವಿಗೀಡಾದವರು ಇಂತಹ ಸಾವು ಬರದಂತೆ ತಡೆಯಲು ಏನು ಮಾಡಬಹುದಿತ್ತು? ಇವೆಲ್ಲಾ ಅಸ್ಪಷ್ಟವಾಗಿವೆ. ಇನ್ನೆಷ್ಟು ಯುವ ಜೀವಗಳು ಹೀಗೆ ಅಕಾಲಿಕವಾಗಿ ಸಾವಿಗೀಡಾಬೇಕೊ ಎಂಬ ಆತಂಕವಂತೂ ಕಾಡುತ್ತಿದೆ.

ರಾಕೇಶ್ ಪೂಜಾರಿ ಅವರು ನಿನ್ನೆ ರಾತ್ರಿ ಮೆಹಂದಿ ಸಮಾರಂಭವೊಂದಕ್ಕೆ ಹಾಜರಾಗಿದ್ದರು. ಅವರ ಕೊನೆಯ ವಿಡಿಯೊ ಎಂಬ ಕೆಲವೊಂದು ವಿಡಿಯೊ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನಾನು ಗಮನಿಸಿದೆ. ರಾಕೇಶ್ ಡಿ.ಜೆ ಸದ್ದಿಗೆ ಗೆಳಯರ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಆ ವಿಡಿಯೊಗಳಲ್ಲಿ ನಾನು ಗಮನಿಸಿದ್ದು ಕಿವಿಗಡಚ್ಚಿಕ್ಕುವ ಡಿಜೆ ಸೌಂಡ್. ಎದೆಬಿರಿಯುವ, ಸೌಂಡ್ ಬಾಕ್ಸ್‌ಗಳು ತಾವೇ ಹರಿದುಹೋಗುತ್ತವೋ ಎಂಬಂತಹ ಸೌಂಡ್.

ಇತ್ತೀಚೆಗೆ ಮದುವೆಗಳಿಗೆ ಮುನ್ನ ಮೆಹಂದಿ ಸಂಭ್ರಮ, ಡಿಜೆ, ಡ್ಯಾನ್ಸು ಕರಾವಳಿಯ ಎಲ್ಲಾ ಮದುವೆ ಸಮಾರಂಭಗಳ ಭಾಗ, ಯುವಕ ಯುವತಿಯರು, ವರನ-ವಧುವಿನ ಮನೆಯ ಯುವಜನರು, ಅವರ ಸ್ನೇಹಿತರು ಮದುವೆಯ ನೆವದಲ್ಲಿ ಖುಷಿಪಡುವ ಕ್ಷಣಗಳಿವು. ಈ ಸಂಭ್ರಮದಲ್ಲಿ ತಪ್ಪೇನೂ ಇಲ್ಲ. ಆದರೆ ತಪ್ಪಾಗುತ್ತಿರುವುದು ಈ ಮೆಹಂದಿ ಸಮಾರಂಭಗಳಲ್ಲಿ ಬಳಸುವ ಎದೆನಡುಗುವಷ್ಟು ಶಕ್ತಿಶಾಲಿ ಸೌಂಡ್ ಬಾಕ್ಸ್‌ಗಳನ್ನು ಅಳವಡಿಸುವುದು. ಇವುಗಳಿಂದ ಬರುವ ಧ್ವನಿ ನಿಜಕ್ಕೂ ಎದೆಯೊಳಗೆ ಕಂಪನ ಸೃಷ್ಟಿಸುವಷ್ಟು ಜೋರಾಗಿರುತ್ತದೆ.

ಸಾಮಾನ್ಯವಾಗಿ ಇಂತಹ ಮೆಹಂದಿ ಸಮಾರಂಭಗಳು ನಡೆಯುವುದು ಮನೆಯ ಅಂಗಳಗಳಲ್ಲಿ, ಮನೆಗೆ ಸಮೀಪವಿರುವ ಖಾಲಿ ಹಿತ್ತಲುಗಳಲ್ಲಿ. ಇಂತಹ ಸಣ್ಣ ವಿಸ್ತೀರ್ಣದ ಜಾಗಕ್ಕೆ ಅಷ್ಟೊಂದು ಸದ್ದು ಮಾಡುವ ಸೌಂಡ್‌ ಬಾಕ್ಸ್‌ಗಳು ನಿಜಕ್ಕೂ ಅಗತ್ಯವಿದೆಯೆ? ಖಂಡಿತ ಇಲ್ಲ. ಸಾಮಾನ್ಯ ಸೌಂಡ್ ಬಾಕ್ಸ್‌ಗಳನ್ನು ಬಳಸಿಯೇ ಮೆಹಂದಿ ಸಮಾರಂಭದ ಸಂಪೂರ್ಣ ಸಂಭ್ರಮವನ್ನು ಸವಿಯಲು ಸಾಧ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಮೆಹಂದಿ ಸಮಾರಂಭಗಳಲ್ಲಿ ಸೌಂಡ್ ಬಾಕ್ಸ್‌ಗಳನ್ನು ಒಂದರ ಮೇಲೊಂದು ಪೇರಿಸಿ ಇಟ್ಟಿರುವುದನ್ನು ನೋಡಿದರೇನೆ ಭಯವಾಗುತ್ತದೆ.

ಹೃದಯದ ಸಮಸ್ಯೆ ಇರುವವರು ಬಿಡಿ, ಗಟ್ಟುಮುಟ್ಟಿನ ಆರೋಗ್ಯದವರಿಗೂ ಈ ಸೌಂಡ್ ಬಾಕ್ಸ್‌ಗಳು ಎದೆ ನಡುಗಿಸುತ್ತವೆ, ಎದೆಯಲ್ಲೆಲ್ಲ ಒಂದು ತರಹದ discomfort ಉಂಟುಮಾಡುತ್ತದೆ. ರಾಕೇಶ್ ಸಾವಿಗೂ ಇಂತಹ ಎದೆಬಿರಿಯುವ ಡಿಜೆ ಸೌಂಡ್ ಏನಾದರೂ ಕಾರಣವಾಗಿರಬಹುದೆ ಎಂಬ ಶಂಕೆಯೊಂದು ಈಗ ಹಲವರಲ್ಲಿ ಮೂಡಿದೆ.

ಇಂತಹ ಎದೆಬಿರಿಯುವ ಡಿಜೆ ಸೌಂಡ್‌ಗಳನ್ನು ಬಳಸಲಾಗುವ ಇನ್ನೊಂದು ಸಂದರ್ಭವೆಂದರೆ ನಮ್ಮೂರುಗಳಲ್ಲಿ ನಡೆಯುವ ಗಣೇಶೋತ್ಸವ ಮತ್ತು ಶಾರದೋತ್ಸವದ ಮೆರವಣಿಗೆಗಳು.
ಈ ಮೆರವಣಿಗೆಗೆಳಲ್ಲಿ ಒಂದು ದೊಡ್ಡ ಗಾತ್ರದ ವಾಹನ ತುಂಬಾ ಸೌಂಡ್‌ಬಾಕ್ಸ್‌ಗಳನ್ನು ಹೇರಿರುತ್ತಾರೆ. ಜೊತೆಗೆ ಅತ್ಯಂತ ಜೋರಾದ ದನಿಯ ಡ್ಯಾನ್ಸ್‌ಗೆ ಹೇಳಿ ಮಾಡಿಸಿರುವ ಪಬ್, ಡಿಸ್ಕೊಗಳಲ್ಲಿ ಹಾಕುವ ತರಹದ ಹಾಡುಗಳನ್ನು ಪ್ಲೇ ಮಾಡಲಾಗುತ್ತದೆ. ಇಲ್ಲಿ ಉಂಟಾಗುವ ಸದ್ದು ಎಷ್ಟೆಂದರೆ ಅಕ್ಷರಶಃ ಎದೆನಡುಗುತ್ತದೆ.

ಈ ಮೆರವಣಿಗೆಗಳು ಹಾದುಹೋಗುವ ಹಾದಿಯುದ್ದಕ್ಕೂ ಅನೇಕರು ಈ ಸದ್ದು ಕೇಳಿ ಎದೆಯ ಮೇಲೆ ಕೈ ಇಟ್ಟುಕೊಂಡು ಪಕ್ಕಕ್ಕೆ ಸರಿಯುವುದನ್ನು ನಾನು ನೋಡಿದ್ದೇನೆ. ಇಂತಹ ಜೋರಾದ ಸದ್ದಿನ ಡಿಜೆ ವಾಹನಗಳು ಆಸ್ಪತ್ರೆಗಳ ಬಳಿ ಸಾಗುವಾಗಲೂ ಅದೇ ಎದೆ ಬಿರಿಯುವ ಸದ್ದು ಮಾಡುತ್ತಿರುತ್ತದೆ ವಿನಃ ಆ ಸದ್ದನ್ನು ಕಡಿಮೆ ಮಾಡುವ ಹೊಣೆಗಾರಿಕೆ ಯಾರಿಗೂ ಇಲ್ಲ. ಈ ಹಿಂದೆ ಇಂತಹ ಡಿಜೆ ಸೌಂಡ್‌ಗಳ ಬಗ್ಗೆ ನಾನು ಬರೆದಾಗ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ನನ್ನ ಮೇಲೆ ಮುಗಿಬಿದ್ದಿದ್ದರು.

ಹಠಾತ್ ಸಾವಿಗೆ ಅನೇಕ ಕಾರಣಗಳು ಇರುತ್ತವೆ. ರಾಕೇಶ್ ಸಾವಿಗೆ ಏನು ಕಾರಣ ಅದು ನಮಗೂ ತಿಳಿದಿಲ್ಲ. ಆದರೆ ನಮ್ಮಸುತ್ತಮುತ್ತ ಇರುವ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರಿಗೆ, ವಯಸ್ಸಾದವರಿಗೆ, ಆರೋಗ್ಯದ ಸನಸ್ಯೆಗಳಿರುವವರಿಗೆ ಈ ಡಿಜೆ ಸೌಂಡ್‌ ತುಂಬಾ ತೊಂದರೆ, discomfort ಉಂಟುಮಾಡುತ್ತದೆ ಎಂಬುದಂತೂ ಸತ್ಯ. ಮದುವೆ, ಮೆಹಂದಿ, ಉತ್ಸವಗಳು, ಮೆರವಣಿಗೆಗಳು ಎಲ್ಲದರ ಸಂಭ್ರಮವನ್ನು ಸಂಪೂರ್ಣವಾಗಿ ಸವಿಯೋಣ. ಆದರೆ ನಮ್ಮ ಡಿಜೆ ಸೌಂಡ್‌ಗಳನ್ನೂ ಇತಿಮಿತಿಯಲ್ಲಿ ಇಡುವುದರಲ್ಲೂ ಸಹ ನಾವು ಎಚ್ಚರ ವಹಿಸೋಣ ನಮ್ಮ ಸಂಭ್ರಮ ಇತರರಿಗೆ ಕಿರಿಕಿರಿ ಆಗಕೂಡದು, ಅಲ್ಲವೆ?

ರಾಕೇಶ್ ಅವರನ್ನು ಹಲವು ಬಾರಿ ಟಿವಿಯಲ್ಲಿ ನೋಡಿದ್ದೆ. ಅವರ ಮುಖದಲ್ಲಿ ಮೊದಲ ನೋಟಕ್ಕೆ ಎದ್ದು ಕಾಣುತ್ತಿದ್ದದ್ದು ಅವರ ಮುಗ್ದತೆ. ಬಹುದೂರ ಸಾಗಬೇಕಾಗಿದ್ದ ಪಯಣವನ್ನು ಬಲುಬೇಗನೆ ನಿಲ್ಲಿಸಿ ಹೊರಟು ಬಿಟ್ಟಿದ್ದಾರೆ ರಾಕೇಶ್.

ಕೊನೆಯ ಮಾತು:- ಮೆಹಂದಿ, ಮೆರವಣಿಗೆಗಳನ್ನು ಸಂಭ್ರಮಿಸೋಣ, ಆದರೆ ಡಿಜೆ ಸದ್ದನ್ನು ಮಿತಿಯಲ್ಲಿಡುವುದನ್ನೂ ಕಲಿಯೋಣ.

ಲೇಖಕರು : ಸಂಗಮೇಶ ಎನ್. ಜವಾದಿ
ಬರಹಗಾರರು, ಪರಿಸರ ಸಂರಕ್ಷಕರು, ಹೋರಾಟಗಾರರು, 9663809340.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!