ಯಾದಗಿರಿ: ಜೂ 19. ಲೋಕಾಯುಕ್ತ ಸಂಸ್ಥೆಯಲ್ಲಿರುವ ಸುಲಿಗೆ ಕೋರರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿಯ ಅದಕ್ಷತೆ ಮತ್ತು ಭ್ರಷ್ಟಾಚಾರ ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿ ಸುಧಾರಣೆ ಮಾಡಿಕೊಳ್ಳಲು ಮನವಿ ಮಾಡಿದರು.
ಲೋಕಾಯುಕ್ತಕ್ಕೆ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡುವ ಅಥವಾ ಕ್ರಮ ಜರುಗಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಭ್ರಷ್ಟ ಮತ್ತು ಪ್ರಭಾವಿಗಳಿಂದ ರಕ್ಷಿಸಬೇಕು ಮತ್ತು ಲೋಕಾಯುಕ್ತವು ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಏನೆಲ್ಲಾ ಸುಧಾರಣೆಗಳನ್ನು ಸಂಸ್ಥೆಯಲ್ಲಿ ಕೂಡಲೇ ಜಾರಿಯಗುವಂತೆ ಮುಂದಾಗಬೇಕು ಮೂಲಕ ಮಾನ್ಯ ಲೋಕಾಯುಕ್ತರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಜಗನ್ನಾಥ್ ಎಸ್ ಚಿಂತನಹಳ್ಳಿ ಮನವಿ ಮಾಡಿದರು.
ನಿಜಕ್ಕೂ ಬದಲಾವಣೆ ಆದಾಗ ಮಾತ್ರ ಲೋಕಾಯುಕ್ತ ಸಂಸ್ಥೆಯ ಘನತೆ ಹೆಚ್ಚುತ್ತದೆ ಹಾಗೂ ರಾಜ್ಯದ ಜನತೆಗೆ ದಕ್ಷ ಪ್ರಾಮಾಣಿಕ ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ಲೋಕಾಯುಕ್ತ ತನ್ನ ಪಾತ್ರವನ್ನು ನಿಭಾಯಿಸಿದಂತಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ನಿಜಲಿಂಗಪ್ಪ, ಬಸವರಾಜ್ ಠಾಣಾಗುಂದಿ, ಗ್ಯಾನಯ್ಯ ಮಂಜುಳಕರ್, ಚೆನ್ನಾರೆಡ್ಡಿ ಗೌಡ ಪಾಟೀಲ್, ರಮೇಶ್ ಅಂಬಿಗೇರ್, ಶಿವಕುಮಾರ್ ಹೆಡಗಿಮದ್ರಾ, ಚಾಂದ್ ಪಾಷಾ, ಚೆನ್ನಮಲ್ಲಪ್ಪ ಬಾಲ್ಚಡ, ಪರಸು ನಾಯಕ್ ಯಾದಗಿರಿ, ಬಾಬು ಅಬ್ಬೆತುಮಕೂರ್, ವಿಶ್ವನಾಥ್ ಅಬ್ಬೆತುಮಕೂರ್, ಶಾಂತಕುಮಾರ್ ಯಲಸತ್ತಿ, ಇನ್ನಿತರರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















