ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಡಿಕೇರಿಯಲ್ಲಿ ಪೊಲೀಸರ ಮನೆಗಳಲ್ಲೇ ಕಳ್ಳತನ, ಬರೋಬ್ಬರಿ 9 ಮನೆಗಳಲ್ಲಿ ಕೈಚಳಕ !

ಮಡಿಕೇರಿ : ಎಲ್ಲಿಯೇ ಕಳ್ಳತನವಾದರೂ ಮೊದಲು ನೆನಪಾಗುವುದು ಪೊಲೀಸರು. ಕಳ್ಳತನವಾದ ಕೂಡಲೇ ಓಡಿ ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿ ಅದು ಹೋಗಿದೆ, ಇದು ಹೋಗಿದೆ ಎಂದು ಅವರ ಮುಂದೆ ಅಳಲು ತೋಡಿಕೊಳ್ಳುತ್ತಾರೆ. ಆದ್ರೆ, ಇಲ್ಲಿ ಪೊಲೀಸರ ಮನೆಗಳೇ ಕಳ್ಳತನವಾಗಿವೆ. ಒಂದಲ್ಲ, ಎರಡಲ್ಲ ಬರೋಬ್ಬರಿ 9 ಪೊಲೀಸರ ಮನೆಗಳನ್ನು ದೋಚಿರುವ ಖದೀಮರು ಖಾಕಿಗೆ ಶಾಕ್ ಕೊಟ್ಟಿದ್ದಾರೆ.

ಬೀಗ ಮುರಿದು ರಾಜಾರೋಷವಾಗಿ ಮನೆಗೆ ನುಗ್ಗಿ ಬೀರು, ಅಲ್ಮೇರಾಗಳಲ್ಲಿ ಹುಡುಕಿ ಕೈಗೆ ಸಿಕ್ಕಷ್ಟು ಹಣ, ಚಿನ್ನಾಭರಣದೊಂದಿಗೆ ಖದೀಮರು ಎಸ್ಕೇಪ್ ಆಗಿದ್ದಾರೆ. ಇಲ್ಲಿ ಕಳ್ಳತನಕ್ಕೆ ಒಳಗಾಗಿರುವುದು ಸಾಮಾನ್ಯ ಜನರ ಮನೆಗಳಲ್ಲಿ ಅಲ್ಲ. ಬದಲಿಗೆ ಕಳ್ಳತನವಾಗಿದ್ದು ಪೊಲೀಸರ ಮನೆಗಳು. ಹೌದು…ಅದು ಒಂದಲ್ಲ ಎರಡಲ್ಲ ಬರೋಬ್ಬರಿ 9 ಪೊಲೀಸರ ಮನೆಗಳಲ್ಲಿ ಕಳ್ಳರು ಕೈಚಳ ತೋರಿಸಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ನಗರದ ರೈಫಲ್ ರೇಂಜ್ ಬಡಾವಣೆಯಲ್ಲಿ ಪೊಲೀಸರ ಮನೆಗಳೇ ಕಳ್ಳತನ ಆಗಿವೆ. ಕಳೆದ ರಾತ್ರಿ ರೈಫಲ್ ರೇಂಜ್‌ನಲ್ಲಿರೋ ಪೊಲೀಸ್ ವಸತಿ ಸಮುಚ್ಛಯಕ್ಕೆ ನುಗ್ಗಿರುವ ಖದೀಮರು, ಬರೋಬ್ಬರಿ 9 ಮನೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ವಸತಿ ಸಮುಚ್ಛಯ ಮುಖ್ಯ ರಸ್ತೆಯಿಂದ ಸ್ವಲ್ಪ ಒಳಭಾಗದಲ್ಲಿದೆ. ಇಲ್ಲಿಯ ಯಾವುದೇ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ. ಎಲ್ಲಿಯೂ ಸಿಸಿಟಿವಿಗಳಿಲ್ಲ ಯಾವುದೇ ಸುರಕ್ಷತೆ ಇಲ್ಲ. ಬಹಳಷ್ಟು ಪೊಲೀಸರು ಇಲ್ಲಿ ವಸತಿ ಗೃಹಕ್ಕೆ ಬೀಗ ಹಾಕಿ ಕರ್ತವ್ಯ ನಿಮಿತ್ತ ಬೇರೆ ಊರುಗಳಿಗೆ ತೆರಳಿರುತ್ತಾರೆ. ಹೀಗಾಗಿ ಈ ಕ್ವಾರ್ಟರ್ಸ್‌ ಕಳ್ಳರಿಗೆ ಹೇಳಿಮಾಡಿಸಿದಂತಿದೆ. ಊರಿಗೆಲ್ಲಾ ರಕ್ಷಣೆ ನೀಡುವ ಪೊಲಿಸರಿಗೆ ರಕ್ಷಣೆ ಇಲ್ಲಾ ಎಂದು ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವ ಮನೆಯಲ್ಲಿ ಸಿಬ್ಬಂದಿ ಇಲ್ವೋ ಅಂತಹ ಮನೆಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡಿದ್ದಾರೆ. ಜಯಚಂದ್ರ ಎಂಬುವರ ಮನೆಯಿಂದ 95 ಸಾವಿರ ರೂಪಾಯಿ ನಗದು, ಮೂರು ಗ್ರಾಂ ಚಿನ್ನಾಭರಣ ದೋಚಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ. ಇನ್ನೂ ಅನೇಕರ ಮನೆಗಳಿಗೆ ನುಗ್ಗಿರುವ ಕಳ್ಳರು, ನಗ ನಾಣ್ಯ ದೋಚಿದ್ದಾರೆ. ಎಷ್ಟು ದೋಚಿದ್ದಾರೆ ಎಂಬುವುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!