ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳಿಗೆ ನೈತಿಕವಾದ ಸಂಸ್ಕಾರ ಕೊಡುವ ಕಾರ್ಯಕ್ರಮಗಳು ಬೇಕು – ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ/ಮುಧೋಳ : ನಮ್ಮ ಗ್ರಾಮೀಣ ಸಂಸ್ಕೃತಿ ಪರಂಪರೆ ಭದ್ರವಾಗಿ ಉಳಿಯಬೇಕಾದರೆ ಪ್ರತಿಯೊಬ್ಬ ಮಗುವಿಗೆ, ಯುವಕ-ಯುವತಿಯರಿಗೆ ನೈತಿಕವಾದ ಸುಸಂಸ್ಕಾರ ಕೊಡುವ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು. ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆದ “102”ನೇ ರವಿವಾರದ ಸತ್ಸಂಗ ಕಾರ್ಯಕ್ರಮದ ಸನ್ನಿಧಾನ ಸ್ಥಾನದಿಂದ ಮಾತನಾಡುತ್ತಾ ಮಕ್ಕಳಲ್ಲಿ. ಯುವಕರಲ್ಲಿ ಜಾತಿ, ಮತ, ಪಂಥ, ಪಕ್ಷಗಳ ಭೇದ ಬುದ್ಧಿಯನ್ನು ತುಂಬದೆ ಸರ್ವ ರನ್ನು ಸಮಭಾವ ಸಮದೃಷ್ಟಿಯಿಂದ ಕಾಣುವುದನ್ನು ಕಲಿಸಬೇಕು, ಸರ್ವರನ್ನೂ ಪ್ರೀತಿಸುವ ಭಾವವನ್ನು ಬೆಳೆಸಬೇಕು ಎಂದರು. ಮುಂದುವರೆದು ಮಾತನಾಡುತ್ತಾ ತಾಯಿ ತಂದೆ ಗುರು ಹಿರಿಯರಲ್ಲಿ ಪ್ರೀತಿ, ನಾಡು ನುಡಿ ಕಲೆಗಳ ಮಹತ್ವ, ನಮ್ಮ ಆಚಾರ ವಿಚಾರ ಪರಂಪರೆ ಉಳಿಯಬೇಕಾದರೆ ಬುದ್ಧ ಬಸವ ಅಂಬೇಡ್ಕರರ ಸಂದೇಶಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಅಶ್ಲೀಲ ಅಸಂಬದ್ಧ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು. ಧರ್ಮ ರಕ್ಷಣೆಯಾದರೆ ನಾವು ರಕ್ಷಣೆ ಆದೇವು. ಧರ್ಮ ರಕ್ಷಣೆ ಮಾಡುವ ಕಾರ್ಯದಲ್ಲಿ ನಾವು ನಿರಂತರ ಪ್ರವೃತ್ತರಾಗಬೇಕೆಂದ ಶರಣಬಸವಶಾಸ್ತ್ರಿಗಳು ನಮ್ಮ ಕನ್ನಡ ನಾಡು ಶರಣರ ಬೀಡು, ಆಧ್ಯಾತ್ಮಿಕತೆಯ ಗೂಡು, ನಮ್ಮ ನೆಲ ಮೂಲ ಸಂಸ್ಕೃತಿಯ ಉಳಿವಿಗಾಗಿ ಯುವಕರು ಜಾಗ್ರತರಾಗಬೇಕು ಎಂದರು.

ಆಶ್ರಮದಲ್ಲಿ ಶ್ರೀ ಸಿದ್ಧಾರೂಢರ ಅಭಿಷೇಕ ಓಂಕಾರ ಭಜನೆ ಮುಂತಾದ ಕಾರ್ಯಕ್ರಮಗಳು ನಡೆದವು‌. ಕುಮಾರ್ ಗುರುಪ್ರಸಾದ್ ಸ್ವಾಮಿಜಿ ಕಾರ್ಯನಿರ್ವಹಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!