
ಬಾಗಲಕೋಟೆ : ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ 17 ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕಾಸಿಂ ಗೊಳಸಂಗಿ ಅವರ ನೇತೃತ್ವದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಸಮಿತಿಯ ಎಲ್ಲಾ ವಾರ್ಡ್ ಸಮಿತಿಗಳ ಕಾರ್ಯಕರ್ತರಿಗಾಗಿ ಕ್ರಿಕೆಟ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಪಂದ್ಯಾವಳಿಗಳಲ್ಲಿ 80 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಮದೀನಾ ಬ್ರಾಂಚ್ ಪ್ರಥಮ ಸ್ಥಾನ ಪಡೆದುಕೊಂಡರೆ ಸುಭಾ ಬ್ರಾಂಚ್ ಎರಡನೆಯ ಸ್ಥಾನ ಪಡೆದು ತೃಪ್ತಿಯಾಗಿದೆ.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಬಾಗಲಕೋಟೆ ಜಿಲ್ಲೆಯ ಉಪಾಧ್ಯಕ್ಷರಾದ ಆಬೀದ್ ಮೋಮಿನ ಬಂಜಾರ ಸಮಾಜ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಬಲರಾಮ್ ನಾಯಕ್, APCR ಅಧ್ಯಕ್ಷರಾದ ನಬಿಸಾಬ ಠಂಕಸಾಲಿ, ವಕೀಲರಾದ ರಾಜು ಲಮಾಣಿ, ವಕೀಲರಾದ ರಫೀಕ್ ಕುಂಟೋಜಿ, ವಕೀಲರಾದ ಅಮೀನ್ ಸಾಬ್ ಪಿಂಜಾರ್, ವಕೀಲರಾದ ಕೈಯುಮ್ ತಾಂಬೋಳಿ, ಶಿಕ್ಷಕರಾದ ಟಿ.ಎಲ್ ಗಂಗೂರ್, ಮೃತುಂಜಯ, ಎಂ ಕೆ ಅಕ್ವಾ ಪಂಡರಾದ ಮುಕ್ತಾರ್ ಮೊಮಿನ, ಮುಸ್ಲಿಂ ಮುಖಂಡರಾದ ಮಹಬೂಬ್ ಸವಣೂರ ಮತ್ತು ಎಸ್ ಡಿ ಪಿ ಐ ತಾಲೂಕಿನ ಕಾರ್ಯದರ್ಶಿಯಾದ ಸದ್ದಾಮ್ ಮುಲ್ಲಾ, ಮಹೆಬೂಬ್ ಹಡಗಲಿ, ಮೋಯಿನ್ ಕಲಾದಗಿ, ಅಲ್ತಾಫ್ ಮದರಿ, ಸಾಧಿಕ ಕಾಂಟ್ರಾಕ್ಟರ್, ಆಸೀಫ್ ರಫುಗಾರ್, ಮೆಹಬೂಬ ಬಾಗವಾನ, ಎಲ್ಲಾ ವಾರ್ಡ್ ಸಮಿತಿಯ ಕಾರ್ಯಕರ್ತರು, ಪಕ್ಷದ ಹಿತೈಷಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ



















