ಶಿವಮೊಗ್ಗ/ ಸೊರಬ : ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಪುರಸಭೆ ವ್ಯಾಪ್ತಿಯ ಹಳೇ ಸೊರಬದ ಗೌರಿಕೆರೆ ಮಠ ಸಮೀಪದ ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ಜಿಂಕೆಯೊಂದು ಮೃತಪಟ್ಟಿದೆ.
ಪಟ್ಟಣದ ಹೊರವಲಯದ ಸೊರಬ ತವನಂದಿ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆ ಗಾಯಗೊಂಡು ನರಳಾಡಿ, ಮೃತಪಟ್ಟಿದೆ.
ಬೆಳಗ್ಗೆ ಜಮೀನಿಗೆ ತೆರಳುವ ರೈತರು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಕರುನಾಡ ಕಂದ



















