ಚಿಕ್ಕಮಗಳೂರು ಜಿಲ್ಲೆಯ ಚಂದ್ರ ದ್ರೋಣ ಪವರ್ತದ ಸೀತಾಳಯ್ಯ ನಗರದಲ್ಲಿ ಪ್ರವಾಸಿಗರು ಕುಡಿದು ಗಲಾಟೆ ಮಾಡಿ ಹೊಡೆದಾಡಿಕೊಂಡಿದ್ದಾರೆ. ಹಾವೇರಿ ಹಾಗೂ ಶಿವಮೊಗ್ಗ ಮೂಲದ ಪ್ರವಾಸಿಗರ ನಡುವೆ ಕಾರು ಪಾರ್ಕಿಂಗ್ ವಿಷಯಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.ನಿತ್ಯವೂ ಹೀಗೆ ಒಂದಿಲ್ಲೊಂದು ಗಲಾಟೆ ನಡೆಯುತ್ತಿರುತ್ತದೆ .ಇದರಿಂದ ಉಳಿದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ,ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಪ್ರವಾಸಿಗರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಪ್ರಸಾದ್ ಹೆಚ್ ಬಿ ತೀರ್ಥಹಳ್ಳಿ



















