ಹುಟ್ಟಿದ ಮೊದಲ ದಿನವೇ ಎರಡು ಕೈಗಳಿಂದ ಎತ್ತಿ ಹಾಡಿಸಿ ಸಂಭ್ರಮದಿಂದ ಜಗಕ್ಕೆ ತೋರಿದ ವೀರ ಅಪ್ಪ. ಅಲ್ಲವೇ…
ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಆಸೆಯ ಆಕಾಂಕ್ಷೆಗಳನ್ನು ಲೆಕ್ಕಿಸದೆ ಜೊತೆಯಾಗಿ ನಿಂತ ಧೀರ ಅಪ್ಪ, ಅಲ್ಲವೇ…
ಜೀವನದಲ್ಲಿ ಸೋತು ಧೈರ್ಯ ಕಳೆದುಕೊಂಡಾಗ ನಿನ್ನೊಂದಿಗೆ ಸದಾ ನಾ ಇದ್ದೀನಿ ಎಂದು ಸಮಾಧಾನಪಡಿಸಿ ಆತ್ಮಸ್ಥೈರ್ಯ ನೀಡುವ ಸರದಾರ ಅಪ್ಪ ಅಲ್ಲವೇ…
ಮನಸು ಮಾಡಿದರೆ ಜಗತ್ತೆ ಗೆಲ್ಲುವ ಶಕ್ತಿ ನಿನ್ನೊಳಗಿದೆ ಎಂದು ಸ್ಪೂರ್ತಿ ತುಂಬ ಏಕೈಕ ಜೀವಿ ಅಪ್ಪ ,ಎಂಬ ದೊರೆಯಲ್ಲವೇ…
ಮಕ್ಕಳು ತಮ್ಮ ಸಂತೋಷದ ಕ್ಷಣಗಳನ್ನು ಖುಷಿಖುಷಿಯಾಗಿ ಅಮ್ಮನ ಜೊತೆ ಸಂಭ್ರಮಿಸುವಾಗಲೂ ಬೇಸರ ವ್ಯಕ್ತಪಡಿಸದೆ ತನ್ನಲ್ಲೇ ಮುಗುಳ್ನಗೆ ಬೀರಿದ ಬಾಸುರ ಅಪ್ಪ ಅಲ್ಲವೇ…
ಪ್ರತಿಯೊಂದು ಸರಿ ತಪ್ಪುಗಳ ತಿದ್ಧಿ ಬುದ್ಧಿ ಹೇಳಿ ವಿಮರ್ಶ ಮಾಡುವ ಗುರುವಿನಂತ ಶಕ್ತಿ ಅಪ್ಪ ಎಂಬ ಆಸರೆ ಅಲ್ಲವೇ…
ಬದುಕಿನ ಆದಿ ಕಾಣಲು ಹೋಗಿ ಕಂಗಾಲಾಗಿ ಕುಳಿತು ಮಕ್ಕಳ ಕಣ್ಣಂಚಿನ ಹನಿಗಳ ವರಿಸಿದ ಕರುಣಾಮಯಿ ಅಪ್ಪ ಎಂಬ ಶೂರ ಅಲ್ಲವೇ…
ಜೀವನವೇ ಸಾಕಾದಾಗ
“ತಾನು ಕಾಣದ ಪ್ರಪಂಚ ತನ್ನ ಮಕ್ಕಳು ಕಾಣಲಿ ಎಂದು ಕನಸಿನಲ್ಲಿ ನೋಯಿಸುತ್ತಾ ತನ್ನಂತರಾಳದಲ್ಲಿ ಅರಿತು ಜೀವನ ಕಾಯುತ್ತಿರುವ ವೃದ್ಧಾಪಿ ಅಪ್ಪ ಎಂಬ ಅಪ್ಪಟ ಬಂಗಾರ ಅಲ್ಲವೇ…

- ಅನುರಾಧ ಡಿ. ಸನ್ನಿ ,ಹೂಲಗೇರಿ



















