ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನನ್ನಮ್ಮ…

ನನ್ನ ಜನ್ಮ ದಿನವೇ ಅವಳ ಪುನರ್ಜನ್ಮ
ಹೇಗೆ ಹೇಳಲಿ ನಿನಗೆ ಧನ್ಯವಾದವ
ಹೇಗೆ ವರ್ಣಿಸಲಿ ನಿನ್ನ ಅಂತರಾತ್ಮವ
ನಿನ್ನ ಪ್ರೀತಿ ವಾತ್ಸಲ್ಯಕ್ಕೆ ಪದಗಳೇ ಸಿಗುತ್ತಿಲ್ಲಮ್ಮ

ನೀ ಕಂಡೆ ನನ್ನ ಖುಷಿಯಲ್ಲೇ ಸ್ವರ್ಗವ
ನೀ ತೋರಿಸಿದೆ ಪ್ರತಿ ಹೆಜ್ಜೆಗೂ ಸನ್ಮಾರ್ಗವ
ನೀ ನೀಡಿದೆ ಎನ್ನ ಬದುಕಿಗೆ ಸಂಸ್ಕಾರದ ಮೋಕ್ಷವ
ನೀ ತೋರಿದ ಮಾರ್ಗವೇ ನನಗೆ ಸೃಜನಾತ್ಮಕವಮ್ಮ

ಅನಕ್ಷರಸ್ಥಳಾದರೂ ಜ್ಞಾನದ ಬೆಳಕು ನೀಡಿದವಳು
ಮಮತೆಯ ಮಮಕಾರ ತುತ್ತು ಕೊಟ್ಟವಳು
ಪ್ರೀತಿಯ ಜ್ಯೋತಿ ಬೆಳಗಿಸಿದವಳು
ಬದುಕಿಗೆ ಸದಾ ನಗುವ ಚೆಲ್ಲುತ್ತಾ ಬಂದವಳು
ನನಗಾಗಿ ಇಡಿ ಜೀವನವೇ ಮೀಸಲಿಟ್ಟವಳು

ನಾ ಸೋತಾಗ ಕೈ ಹಿಡಿದು ಮುನ್ನಡೆಸಿದವಳು
ನಾ ಗೆದ್ದಾಗ ಕೈ ತಟ್ಟಿ ಪ್ರೋತ್ಸಾಹಿಸಿದಳು
ನನ್ನ ಉಸಿರು ನಿನ್ನ ಆದರ್ಶದಲ್ಲಿದೆ ಎಂದವಳು
ನನ್ನ ಕೀರ್ತಿ ಸ್ಪೂರ್ತಿ ನೀನೆಂದು ಜಗ ಮಗ ಎನಿಸಿದಳು ಅಮ್ಮ

ಅಮ್ಮ ನೀ ಕೊಟ್ಟ ಜನ್ಮ ನಿನಗೆ ಮೀಸಲಮ್ಮ
ಅಮ್ಮ ಅಂತ ಕೂಗಿದರೆ ಬಾ ಕಂದ ಅಂದೆಮ್ಮ
ನಿನ್ನಿಂದಲೇ ಈ ಜನ್ಮ ಸಾರ್ಥಕವಮ್ಮ
ನಿನ್ನ ಪಾದ ಸ್ಪರ್ಶಕ್ಕೆ ಸದಾ ಚಿರಸ್ಮರಣೀಯ ನೋಡಮ್ಮ.

  • ಅನುರಾಧ ಡಿ ಸನ್ನಿ, ಹೂಲಗೇರಿ.
    ಕುಷ್ಟಗಿ ತಾ. ಕೊಪ್ಪಳ ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!