ಬಳ್ಳಾರಿ / ಕಂಪ್ಲಿ : ಮಾದಕ ವಸ್ತುಗಳ ಸೇವನೆಗೆ ಒಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್ಐ ಅವಿನಾಶ ಕಾಂಬಳೆ ಹೇಳಿದರು.
ಕಂಪ್ಲಿ ಪೊಲೀಸ್ ಠಾಣೆ ವತಿಯಿಂದ ನಗರದ ಡಿಎಚ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ ವಿರೋಧಿ ಕುರಿತು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ, ತಂಬಾಕು, ಡ್ರಗ್ಸ್ ,ಗಾಂಜಾ, ಅಫೀಮು ಮತ್ತಿತರೆ ಇವು ಮಾದಕ ವಸ್ತುಗಳಾಗಿವೆ, ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದನ್ನು ತಿಳಿ ಹೇಳಬೇಕಿದೆ ಎಂದರು.
ಕಾಲೇಜ್ ನ ಪ್ರಾಂಶುಪಾಲ ಬಸವರಾಜಸ್ವಾಮಿ ಅವರು ಮಾತನಾಡಿ, ಭಾರತದಲ್ಲಿ 3 ಕೋಟಿ ಮಂದಿ ಮಾದಕ ವ್ಯಸನದಿಂದ ಹೊರ ಬರಲು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರಿಗೆ ವ್ಯಸನದಿಂದ ಹೊರ ಬರಲು ಚಿಕಿತ್ಸೆ ಪಡೆಯಬೇಕು ಎಂಬ ಅರಿವು ಇಲ್ಲ. 10 ವರ್ಷದಲ್ಲಿ ಶೇ.70 ರಷ್ಟು ಗಾಂಜಾ ಸೇವನೆ ಹೆಚ್ಚಾಗಿದೆ ಈ ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮುತ್ತುರಾಜ್, ಕಾಲೇಜ್ ನ ಆಡಳಿತ ಅಧಿಕಾರಿ ಡಾ. ಸಂದೀಪ್ ಕುಮಾರ್, ಉಪನ್ಯಾಸಕರಾದ ರಾಘವೇಂದ್ರ,
ಆರ್. ಸುಭಾನ್, ಮೆಹಬೂಬ್ ಬಿ ಮತ್ತಿತರರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















