ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ವಿಜಯನಗರ ಮಹಾವಿದ್ಯಾಲಯಕ್ಕೆ ಕನ್ನಡ ಚಲನಚಿತ್ರ ಖ್ಯಾತ ನಟ, ನಿರ್ಮಾಪಕ ಅಜಯ್ ರಾವ್ ಭೇಟಿ ನೀಡಿ ಈ ಹಿಂದೆ ಕಾಲೇಜು ಓದುತ್ತಿರುವ ಸಂಧರ್ಭದಲ್ಲಿನ ವಿಷಯಗಳನ್ನು ಮೆಲುಕು ಹಾಕಿದರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಾವು ಚೆನ್ನಾಗಿ ಓದಿ ಪದವಿ ಪಡೆದು, ಯಾವುದಾದರೂ ವಿಷಯದಲ್ಲಿ ಪರಿಣಿತಿ ಪಡೆದು ಉತ್ತಮ ನಾಗರೀಕರಾಗಿ , ಮೊದಲು ನಿಮ್ಮ ಮನೆಯ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ ನಂತರ ಶಾಲೆ ಹಾಗೂ ಕಾಲೇಜ್ ಗೆ, ಊರಿಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಏನಾದರೂ ಕೊಡುಗೆಯನ್ನು ನೀಡುವಂತವರಾಗಿ, ಏನಾದರೂ ಆಗಿ ಯಾರಿಗೂ ತೊಂದರೆ ಕೊಡಬೇಡಿ, ಯುವಕ ಯುವತಿಯರು ಯಾರೂ ಜಗಳ ಮಾಡದೆ ಎಲ್ಲರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ, ಎಲ್ಲರಿಗೂ ಒಳ್ಳೆಯದನ್ನು ಮಾಡಿ ಎಂದು ವಿಧ್ಯಾರ್ಥಿನಿ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಾನು ಓದಿದ ಕಾಲೇಜು ನನಗೆ ಬಹಳಷ್ಟು ಉತ್ತಮ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಕಾಲೇಜು ನನಗೆ ಶಿಸ್ತುನ್ನು ಕಲಿಸಿದೆ.
ಪ್ರಪಂಚದ ಯಾವುದೇ ದೇಶಕ್ಕೆ ಹೋದರೂ ಎಲ್ಲಾ ಕ್ಷೇತ್ರಗಳಲ್ಲೂ ವಿಜಯನಗರ ಕಾಲೇಜಿನ ವಿದ್ಯಾರ್ಥಿಗಳು ಸಿಗುತ್ತಾರೆ ಅದು ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್. ಮಲ್ಲಿಕಾರ್ಜುನ, ಕಾಲೇಜು ಪ್ರಾಂಶುಪಾಲ ಡಾ. ಪ್ರಭುಗೌಡ, ಪದವಿ ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ ಗೌಡ, ಹಳೆಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷ ಪಿ.ಎನ್. ಶ್ರೀಪಾದ, ಉಪಾಧ್ಯಕ್ಷರುಗಳಾದ ಕೋರಿಶೆಟ್ಟ ಲಿಂಗಪ್ಪ, ಗೋಗ್ಗಾ ಚೆನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕಾರ್ಯದರ್ಶಿ ಓಪ್ಪತ್ತೆಪ್ಪ, ಮಹಾವೀರ ಜೈನ್, ಕಿರಣ್ ಕುಮಾರ್, ವೀರಭದ್ರ ಸ್ವಾಮಿ, ಸುನೀಲ್ ಸೇರಿದಂತೆ ಮತ್ತಿತರರು ಇದ್ದರು
ವರದಿ : ಜಿಲಾನಸಾಬ್ ಬಡಿಗೇರ್



















