ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜೋಳ ಖರೀದಿ ಕೇಂದ್ರದ ದಿನಾಂಕವನ್ನು 15 ದಿನಗಳ ವರೆಗೆ ವಿಸ್ತರಿಸಿ : ಕೆ ಆರ್ ಎಸ್ ಪಕ್ಷದ ಮನವಿ

ರಾಯಚೂರು/ ಸಿಂಧನೂರು :
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಸಿಂಧನೂರಿನಲ್ಲಿ ಉಪ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರಿಗೆ ಜೋಳ ಖರೀದಿ ಕೇಂದ್ರದ ದಿನಾಂಕವನ್ನು 15 ದಿನಗಳವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮನವಿಯ ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ಪ್ರಧಾನ ಕಾರ್ಯದರ್ಶಿ ನಿರುಪಾದಿ ಕೆ. ಗೋಮರ್ಸಿ ಅವರು ರಾಯಚೂರು ಜಿಲ್ಲೆಯಲ್ಲಿ ರೈತರು ಹೆಚ್ಚಿನ ಜೋಳವನ್ನು ಬೆಳೆದಿದ್ದು ವಿಶೇಷ ಎಂಬಂತೆ ಸಿಂಧನೂರು ತಾಲೂಕಿನಲ್ಲಿ ರೈತರು ಹೆಚ್ಚಿನ ಜೋಳವನ್ನು ಬೆಳೆದಿರುತ್ತಾರೆ. ಈಗಾಗಲೇ ಸುಮಾರು ಐದಾರು ತಿಂಗಳ ಗಳಿಂದ ಮುಂಗಾರು ಮತ್ತು ಹಿಂಗಾರು ಜೋಳ ಖರೀದಿ ಪ್ರಕ್ರಿಯೆ ಜಿಲ್ಲೆ ಹಾಗೂ ತಾಲೂಕಿನಲ್ಲಿ ನಡೆಯುತ್ತಿದ್ದರೂ ಸಹ ಅಧಿಕಾರಿಗಳು ಹಾಗೂ ಕೇಂದ್ರಗಳ ಸಮಸ್ಯೆಗಳಿಂದಾಗಿ ಸರ್ಕಾರ ಸರಿಯಾದ ಸಮಯಕ್ಕೆ ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡದ ಪರಿಣಾಮ ಮತ್ತು ಈ ವರ್ಷ ಸಿಂಧನೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿರುವ ಕಾರಣ ರೈತರು ನೊಂದಣಿ ಮಾಡಿದ ಜೋಳ ಖರೀದಿ ಕೇಂದ್ರಕ್ಕೆ ಸರ್ಕಾರ ನಿಗದಿ ಮಾಡಿದ ದಿ. 30/6/2025 ಕೊನೆ ದಿನ ಇರುವ ಕಾರಣ ನೋಂದಣಿಯಾದ ಎಲ್ಲಾ ರೈತರು ಜೋಳದ ಕೇಂದ್ರಕ್ಕೆ ತೂಕ ಮಾಡಿ ಖರೀದಿ ಕೇಂದ್ರಕ್ಕೆ ನಾನ ಕಾರಣಗಳಿಂದಾಗಿ ಜೋಳ ಸಾಗಿಸುವಲ್ಲಿ ಸಾಧ್ಯವಾಗದ ಕಾರಣ ಸಿಂಧನೂರು ತಾಲೂಕಿನ ರೈತರ ಸ್ಥಿತಿ ಚಿಂತಾಜನಕವಾಗಿದೆ ಸಾವಿರಾರು ಕ್ವಿಂಟಾಲ್ ಜೋಳಗಳು ರೈತರ ಬಳಿ ಉಳಿದಿದ್ದು ಸರ್ಕಾರದ ಖರೀದಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಒಂದು ವೇಳೆ ದಿ. 30/06/2025 ರಂದೇ ಕೇಂದ್ರಗಳನ್ನು ಮುಚ್ಚಿದಲ್ಲಿ ಸಾವಿರಾರು ರೈತರು ಕಷ್ಟಪಟ್ಟು ಬೆಳೆದ ಜೋಳ ಮಧ್ಯವರ್ತಿಗಳಿಗೆ, ದಲ್ಲಾಳಿಗಳಿಗೆ ಖಾಸಗಿಯವರಿಗೆ ಮಾರುವ ಪರಿಸ್ಥಿತಿ ಉಂಟಾಗಲಿದ್ದು ರೈತರು ಸಾಲದ ಕೂಪಕ್ಕೆ ಜಾರಲಿದ್ದಾರೆ.
ಹಾಗಾಗಿ ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮ ರೀತಿಯಲ್ಲಿ ಪರಿಗಣಿಸಿ ರೈತರ ಜೋಳ ಖರೀದಿಗೆ ಈಗಾಗಲೇ ನೀಡಿದ ಗಡುವಿನ ದಿನಾಂಕಕ್ಕಿಂತ ಇನ್ನೂ 15 ದಿನಗಳವರೆಗೆ ವಿಸ್ತರಣೆ ಮಾಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಆಗ್ರಹದ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಪ್ಪ ಬೇರಿಗೆ, ಶರಣಪ್ಪ ಜನತಾ ಕಾಲೋನಿ, ಅಜೀದ್ ಕುನಟಿಗೆ, ಕನಕಪ್ಪ ಎಲೆಕೂಡ್ಲಿಗಿ, ಹನುಮಂತ ಸುಕಲ್ಪೇಟೆ, ಜಗದೀಶ್ ಸುಲ್ತಾನಾಪುರ, ಶಂಶುದ್ದೀನ್ ಗೋಮರ್ಸಿ, ಹನುಮಂತ ಮುದ್ದಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!