ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನರ ಆರೋಗ್ಯದ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ : ಟಿ.ವಿ.ಸುದರ್ಶನರೆಡ್ಡಿ

ಬಳ್ಳಾರಿ / ಕಂಪ್ಲಿ : ಪಟ್ಟಣದ 8ನೇ ವಾರ್ಡಿನ ಎಂ.ಡಿ.ಕ್ಯಾಂಪಿನ ಸಿಂಧೋಳ್ ಕಾಲೋನಿಯ ವೀರನಾಗಮ್ಮ ಸಮುದಾಯ ಭವನದಲ್ಲಿ ಬಳ್ಳಾರಿ ಐಎಂಎ, ಡಬ್ಲ್ಯೂಡಿಡಬ್ಲ್ಯೂ ಮತ್ತು ಕಂಪ್ಲಿ ಪುರಸಭೆ ಸದಸ್ಯ ಟಿ.ವಿ.ಸುದರ್ಶನರೆಡ್ಡಿ ಅವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಭಾನುವಾರ ನಡೆಯಿತು.
ಸದಸ್ಯ ಟಿ.ವಿ.ಸುದರ್ಶನರೆಡ್ಡಿ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ ಎಂಬಂತೆ ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಧುನಿಕ ಭಾರತದಲ್ಲಿ ಆಹಾರದ ಪದ್ಧತಿಯಲ್ಲಿ ಬದಲಾವಣೆಯಾದ ಹಿನ್ನಲೆ ನಾನಾ ರೋಗ ರುಜಿನಗಳು ಮನುಷ್ಯನ ದೇಹದಲ್ಲಿ ಸೇರುವಂತಾಗಿದೆ ಅಪೌಷ್ಟಿಕ ಆಹಾರದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ಪೌಷ್ಟಿಕ ಆಹಾರ ಸೇವೆನೆ ಜತೆಗೆ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆ ಕಂಡಲ್ಲಿ ಒಳ್ಳೆಯ ಚಿಕಿತ್ಸೆಯೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಇಲ್ಲಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಳ್ಳಾರಿ ಐಎಂಎ, ಡಬ್ಲ್ಯೂಡಿಡಬ್ಲ್ಯೂ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ನಡೆಸಿದ್ದು, ಇದರ ಸದುಪಯೋಗದೊಂದಿಗೆ ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದರು.
ಇಲ್ಲಿನ ಸಾಕಷ್ಟು ಜನರ ಆರೋಗ್ಯ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ ಅರುಣಾ, ಡಾ. ಸಂಗೀತ ಕಟ್ಟಿಮನಿ, ಡಾ. ಜಯಾಶ್ರಿ, ಡಾ. ಶ್ರೀಲಕ್ಷ್ಮಿ, ಡಾ.ಪ್ರಣಿತಾ, ಡಾ.ರೇಣುಕಾ ಮಂಜುನಾಥ್, ಮುಖಂಡರಾದ ಜಿ.ಸುಧಾಕರ, ಬಿ.ಕೆ.ವಿರುಪಾಕ್ಷಿ, ರಮೇಶ, ಮಲ್ಲೇಶ, ಟ್ಯಾಕ್ಸಿ ಈರಣ್ಣ, ರಬಿಯಾ ನಿಸಾರ್ ಸೇರಿದಂತೆ ಸ್ಥಳೀಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!