ಮೈಸೂರು :ನಿವೃತ್ತ ಶಿಕ್ಷಕರಾದ ಬಿ.ಎಚ್.ಶ್ರೀಕಂಠ ಮೂರ್ತಿ (೮೮) ಅವರು ಜೂನ್ 29 ರಂದು ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಿಧನರಾದರು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಾಚಹೊಳಲು, ಜೈನಹಳ್ಳಿ,ಸಿಂಗನಹಲ್ಲಿ ಮೊದಲಾದ ಗ್ರಾಮೀಣ ಪ್ರದೇಶಗಳಲ್ಲೇ ತಮ್ಮ ಇಡೀ ಶಿಕ್ಷಕ ಸೇವೆ ಅವರು ಕಳೆದಿದ್ದರು. ಹಿರಿಯ ಸಾಹಿತಿ ಭೇರ್ಯ ರಾಮಕುಮಾರ್ ಅವರು ಸೇರಿದಂತೆ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ವರ್ಗದವರನ್ನು ಇವರು ಬಿಟ್ಟು ಅಗಲಿದ್ದಾರೆ.
- ಕರುನಾಡ ಕಂದ



















