ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮುಕರಂಬಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಠದಲ್ಲಿ ಶ್ರೀ ರೇವಣಸಿದ್ದೇಶ್ವರ ಗೆಳೆಯರ ಬಳಗದ ವತಿಯಿಂದ ಶ್ರೀಯುತ ಶ್ರೀ ಶಿವರಾಜ ಪಾಟೀಲ್ ಗೊಣಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಇವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡು ಅವರನ್ನು ಸನ್ಮಾನಿಸಲಾಯಿತು. ನಮ್ಮ ದೇಶದ ಬೆನ್ನೆಲುಬು ಅಂದರೆ ರೈತ. ರೈತರು ಹಳ್ಳಿಯಲ್ಲಿ ಸರಳ ಮತ್ತು ಪ್ರಾಮಾಣಿಕ ಜೀವನವನ್ನು ನಡೆಸುತ್ತಾರೆ. ರೈತರು ಹೊಲದಲ್ಲಿ ದುಡಿಯುತ್ತಾರೆ, ಅವರು ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ತಮ್ಮ ಕಾಯಕವನ್ನು ಪ್ರಾರಂಭಿಸುತ್ತಾರೆ ರೈತರು ಹೊಲದಲ್ಲಿ ಆಹಾರವನ್ನು ಬೆಳೆಸಿ ನಮಗೆಲ್ಲರಿಗೂ ನೀಡುತ್ತಾರೆ. ಅದಕ್ಕಾಗಿ ಶ್ರೀ ಶಿವರಾಜ್ ಪಾಟೀಲ್ ಗೋಣಿಗಿ ರವರು ರೈತರ ಯಾವುದೇ ಸಮಸ್ಯೆಗಳನ್ನು ಬೆನ್ನೆಲುಬಾಗಿ ನಿಂತು ಪರಿಹಾರ ಕೊಂಡುಕೊಳ್ಳಲು ಯಶಸ್ವಿ ಆಗಬೇಕೆಂದು ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ ತಾಲೂಕ ರೈತ ಸೇನೆ ಅಧ್ಯಕ್ಷರು ಮಾತನಾಡಿದರು. ಈ ಸಂದರ್ಭದಲ್ಲಿ ಆ ಗ್ರಾಮಗಳ ಗೆಳೆಯರ ಬಳಗದವರು ರಟಕಲ್, ಮುಕರಂಬಿ,ಚಂದನಕೇರ, ಬೇಡಸೋರ,ಗೊಣಗಿ, ಮಾವಿನಸುರ,ಅರಣಕಲ್,ರೇವಗಿ, ಕಂದಗೋಳ ಹೊಳಗೇರಾ,ಮತ್ತು ಇನ್ನೂ ಅನೇಕ ಗ್ರಾಮದ ರೈತರು ಭಾಗಿಯಾಗಿದ್ದರು.
ವೇದಿಕೆಯನ್ನು ಉದ್ದೇಶಿಸಿ ರಟಕಲ್ ವಿರಕ್ತ ಮಠದ ಪೂಜ್ಯ ಶ್ರೀ ನೀಲಕಂಠ ದೇವರು ಮಾತನಾಡಿದರು. ಚಂದ್ರಶೇಖರಯ್ಯ ಸ್ವಾಮಿ ಮುಕರಂಬಿ ದತ್ತತ್ರಾಯ ರಾಯಗೊಳ ಮಾತನಾಡಿದರು. ಚಂದನಕ್ಕೆರ,ರೈತ ಮುಖಂಡರುಗಳಾದ ಬಸವರಾಜ ಪಾಟೀಲ್ ಬೆಡ್ಸೂರ ಶಿವರಾಜ ಚೌಕ ಮಂಜು ಪಾಟೀಲ್ ಕಂದಗೋಳ ಮತ್ತು ಇನ್ನೂ ಅನೇಕ ರೈತ ಮುಖಂಡರು ಭಾಗಿಯಾಗಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















