ಸಾರ್ಥಕ ಸೇವೆಯ ವ್ಯಕ್ತಿತ್ವಕ್ಕೆ ಉನ್ನತ ಬೆಲೆ- ಸುನೀಲಕುಮಾರ.
ಯಾದಗಿರಿ/ಗುರುಮಠಕಲ್: ಗುರುಮಠಕಲ್ ಬಸ್ ಘಟಕದ ಸಂಚಾರಿ ನಿರೀಕ್ಷಕರಾದ ಚಂದ್ರಾರೆಡ್ಡಿ ಕೊರಡೆ ಸಾರಿಗೆ ಸಂಸ್ಥೆಯ ಸೇವೆಯನ್ನು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಇಲಾಖೆಯ ಎಲ್ಲರಿಗೂ ಅಚ್ಚು ಮೆಚ್ಚಿನ ಹಾಗೂ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗುವಂತಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಾಣಾಧಿಕಾರಿ ಸುನೀಲಕುಮಾರ ಚಂದರಗಿ ಹೇಳಿದರು.
ಪಟ್ಟಣದ ಗುರುಮಠಕಲ್ ಘಟಕದ ಸಂಚಾರಿ ನಿರೀಕ್ಷಕ ಚಂದ್ರಾರೆಡ್ಡಿ ಕೊರಡೆ ಅವರ ವಯೋನಿವೃತ್ತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಠವಾದ ವ್ಯಕ್ತಿತ್ವವನ್ನು ರೂಪಿಸಿ ಇತರಿರಿಗೆ ಮಾರ್ಗದರ್ಶಕರಾಗಿದ್ದಾರೆ. ಗುರುಮಠಕಲ್ ಘಟಕವನ್ನು ಜಿಲ್ಲೆಯಲ್ಲಿಯೇ ಉತ್ತಮ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುವಂತೆ ಸಿಬ್ಬಂದಿಗಳ ಸಮನ್ವಯ ಮತ್ತು ಸಹಕಾರದಿಂದ ಉತ್ತಮ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಅವರ ಸೇವೆ ಎಲ್ಲರಿಗೂ ಅನುಕರಣೀಯವಾಗಿದೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಘಟಕ ವ್ಯವಸ್ಥಾಪಕ ಪ್ರವೀಣ ಕುಮಾರ ಯರನಾಳ ಮಾತನಾಡಿ, ಜನರೊಂದಿಗೆ ನೇರ ಸಂಪರ್ಕ ಹೊಂದಿದ ಸಂಸ್ಥೆಯ ಅಭಿವೃದ್ಧಿಗೆ ಸಿಬ್ಬಂದಿಗಳ ಸಹಕಾರ ಅತಿ ಮಹತ್ವ ಹೊಂದಿರುತ್ತದೆ. ಆಯಾ ಘಟಕಗಳ ಸಿಬ್ಬಂದಿಗಳ ಸಮನ್ವಯದಿಂದ ಇಂದು ಗುರುಮಠಕಲ್ ಘಟಕವು ಸಂಸ್ಥೆಯಲ್ಲಿ ಹೆಸರುವಾಸಿಯಾಗಿದೆ. ಸಂಚಾರಿ ನಿರೀಕ್ಷಕ ಚಂದ್ರಾರೆಡ್ಡಿ ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಾಕನಹಳ್ಳಿ ಶ್ರೀಗಳಾದ ಸಿದ್ದಲಿಂಗ ಶಿವಾಚಾರ್ಯರು ವಹಿಸಿದ್ದರು, ವಿಭಾಗೀಯ ಸಂಚಲನಾಧಿಕಾರಿ ವಿ.ಆರ್.ರೆಡ್ಡಿ, ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಬಂಗಾರಪ್ಪ ಸೇರಿದಂತೆ ಘಟಕ ಅಧಿಕಾರಿಗಳಾದ ಸಾಯಿರೆಡ್ಡಿ ಚಪೆಟ್ಲಾ, ಈರಣ್ಣ ಮುಂಡರಗಿ, ಪ್ರಕಾಶರೆಡ್ಡಿ ದಂತಾಪೂರ, ಶರಣಪ್ಪ ಹೂಗಾರ, ಮಹೇಂದ್ರರೆಡ್ಡಿ, ನಿವೃತ್ತ ಸಂಚಾರಿ ನಿಯಂತ್ರಕರಾದ ನಾಗಣ್ಣ ಕಾಳಗಿ, ರಾಮ ರೆಡ್ಡಿ,ಶ್ರೀನಿವಾಸ ರೆಡ್ಡಿ, ರಘುನಾಥರೆಡ್ಡಿ ಹಾಗೂ ಎಲ್ಲಾ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















