ಜನರಿಗೆ ವೇಗವಾಗಿ, ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತ ಸೇವೆಗಳನ್ನು ಒದಗಿಸುವ ನಮ್ಮ ಬದ್ಧತೆ – ಶಾಂತ ಗೌಡ ಬಿರಾದಾರ
ಯಾದಗಿರಿ/ ಗುರುಮಠಕಲ್ : ಸಾರ್ವಜನಿಕರೊಂದಿಗೆ ಸ್ನೇಹದಿಂದ ಕಾರ್ಯನಿರ್ವಹಿಸಿದಲ್ಲಿ ನಾವು ಮಾಡುವ ಕೆಲಸಗಳು ಸುವ್ಯವಸ್ಥಿತವಾಗಿ ನಡೆಯುತ್ತವೆ ಎಂದು ತಹಸೀಲ್ದಾರ್ ಶಾಂತಗೌಡ ಬಿರಾದಾರ್ ಹೇಳಿದರು.
ಕಂದಾಯ ದಿನಾಚರಣೆಯ ಅಂಗವಾಗಿ ಸಸಿ ನೆಡುವುದರ ಮೂಲಕ ವಿಶೇಷವಾಗಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಿ ಮಾತನಾಡಿದ ಅವರು,
ಸರ್ಕಾರದ ಎಲ್ಲಾ ಇಲಾಖೆಗಳ ಮಾತೃ ಇಲಾಖೆ ಕಂದಾಯ ಇಲಾಖೆಯಾಗಿದೆ. ಕಂದಾಯ ದಿನವು ಕೇವಲ ಸಂಭ್ರಮಾಚರಣೆಯ ಸಂದರ್ಭವಲ್ಲ, ಬದಲಾಗಿ ಸ್ವಯಂ ಮೌಲ್ಯಮಾಪನಕ್ಕೆ ಒಂದು ಕ್ಷಣವಾಗಿದೆ. “ಜನರಿಗೆ ವೇಗವಾಗಿ, ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತ ಸೇವೆಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ ಇದು” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ ನರಸಿಂಹ ಸ್ವಾಮಿ, ಕಂದಾಯ ನಿರೀಕ್ಷಕ ದೊಡ್ಡ ಬಸವರಾಜ್, ಗ್ರಾಮ ಆಡಳಿತ ಅಧಿಕಾರಿ ಶರತ್ ಕುಮಾರ, ಶಿವಕುಮಾರ, ಪಂಪಾಪತಿ, ಶರಣಪ್ಪ, ನೌನಾಥ, ಲಾಲಭಾಷ, ದಯಾನಂದ, ಶ್ರೀನಿವಾಸ ಹಾಗೂ ಕಛೇರಿ ಸಿಬ್ಬಂದಿಗಳಾದ ಶಿವಕುಮಾರ, ಸೋಮಶೇಖರ್, ಶಾರದಾ, ಸುನೀತಾ, ಲಕ್ಷ್ಮಿಬಾಯಿ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















