ಕಲ್ಬುರ್ಗಿ : ಸರ್ಕಾರದ ಆದೇಶದಂತೆ ಗು. ವಿ.ಸ. ಕಂ. ನಿ. ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಕಲ್ಬುರ್ಗಿ ಜೆಸ್ಕಾಂ ವ್ಯಾಪ್ತಿಯಲ್ಲಿರುವ ಎಲ್ಲಾ ತೋಟದ ಮನೆಗಳಿಗೆ ಹಾಗೂ ಜಮೀನುಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮತ್ತು ಏಳು ತಾಸು ಹಗಲು ಹೊತ್ತಿನಲ್ಲಿ ಥ್ರೀ ಫೇಸ್ ಕೊಡಬೇಕು, ಜೆಸ್ಕಾಂ ವ್ಯಾಪ್ತಿಯಲ್ಲಿ ನಿರ್ಮಿಸುವ ಹಲವಾರು ತೋಟದ ಮನೆಗಳಿಗೆ ಜಮೀನಿನಲ್ಲಿ ಹಾಗೂ ಊರಿನಿಂದ ದೂರ ಮತ್ತು ಹೊಲಗಳ ಇರ್ತಕ್ಕಂತ ಮನೆಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ಅಲ್ಲಿ ವಾಸಿಸುತ್ತಿರುವಂತ ರೈತರಿಗೆ, ರೈತನ ಮಕ್ಕಳಿಗೆ ಅನಾನುಕೂಲವೆ ಜಾಸ್ತಿ ಏನೇನು ಅಂತ ಕೇಳಿದರೆ ವಿಷಜಂತುಗಳಿಂದ, ಕಾಡುಪ್ರಾಣಿಗಳಿಂದ ಮತ್ತು ಮಕ್ಕಳಿಗೆ ವಿದ್ಯಾಭ್ಯಾಸ ಹೀಗೆ ಹಲವಾರು ತೊಂದರೆ ತಾಪತ್ರೆಗಳಾಗುತ್ತಿವೆ. ಆದಕಾರಣ ಈಗಾಗಲೇ ಸರಕಾರ ರೈತರ ಬಗ್ಗೆ ಕಾಳಜಿ ವಹಿಸಿ ಜನೇವರಿಯಿಂದಲೇ ರೈತರಿಗೆ ವಿದ್ಯುತ್ ಕೊಡಬೇಕೆಂದು ಆದೇಶ ಹೊರಡಿಸಿರುತ್ತದೆ. ಆದ ಕಾರಣ ವಿಳಂಬ ಮಾಡುವುದು ಸರಿಯಲ್ಲ ರೈತ ದೇಶದ ಬೆನ್ನೆಲುಬು ರೈತನಿಗೆ ಅನ್ಯಾಯ ಮಾಡಿದರೆ ದೇಶಕ್ಕೆ ಅನ್ಯಾಯ ಮಾಡಿದಂತೆ. ಸ್ವಲ್ಪ ರೈತನ ಕಡೆ ಗಮನಹರಿಸಿ ಕೂಡಲೆ ಅಧಿಕಾರಿಗಳನ್ನು ನೇಮಿಸಿ ತೋಟದ ಮನೆಗೆ ಕರೆಂಟ್ ಸಪ್ಲೈ ಮಾಡಿಸಿ, ದಯಾಳುಗಳಾದ ತಾವು ಕರೆಂಟ್ ಹಾಕಿಸಿ ಕೊಡಬೇಕೆಂದು ಅವಳಿ ತಾಲೂಕುಗಳಾದ ಚಿಂಚೋಳಿ ಮತ್ತು ಕಾಳಗಿ ರೈತರು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ. ಈಗಾಗಲೇ ಸರ್ಕಾರದ ಆದೇಶದಂತೆ ಹಗಲ ಹೊತ್ತಿನಲ್ಲಿ ಏಳು ತಾಸು ತ್ರೀ ಫೇಸ್ ಕರೆಂಟ್ ಕೊಡಲು ಆದೇಶ ನೀಡಿದರು ಸರಿಯಾಗಿ ಎರಡು ತಾಸು ಸಹ ಬರುತ್ತಿಲ್ಲ ವಿಪರ್ಯಾಸ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎದ್ದು ಕಾಣುತ್ತಿದೆ. “ಒಂದು ಗಾದೆ ಮಾತಿದೆ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಅಂದಂಗಾಯ್ತು ನಮ್ಮ ರೈತರ ಬಾಳು. ಕೂಡಲೇ ಪ್ರತಿ ದಿನಾ ರೈತರಿಗೆ 7 ತಾಸು ಕರೆಂಟ್ ಕೊಡಬೇಕೆಂದು ಆಗ್ರ ಮಾಡುತ್ತೇವೆ ವೀರಣ್ಣ ಗಂಗಾಣಿ ತಾಲೂಕ ಅಧ್ಯಕ್ಷರು ರೈತ ಸೇನೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೋಡ್ಲಿ, ಕಾಳಗಿ, ಚಿಂಚೋಳಿ ರೈತ ಮುಖಂಡರುಗಳಾದ ಶಿವರಾಜ ಪಾಟೀಲ್, ಸಿದ್ದಯ್ಯ ಸ್ವಾಮಿ, ಶಿವಕುಮಾರ ಕೋಲ್ಡಿ, ಹನುಮಂತ್ ರೆಡ್ಡಿ ದೇಶಮುಖ,ಚಂದ್ರಕಾಂತ ಪೆದ್ದಿ,ಸಿರಾಜೋದ್ದಿನ್ ಕೊಲ್ಡಿ, ರಮೇಶ್ ಆಡಕಿ, ಇನ್ನೂ ಅನೇಕ ರೈತ ಮುಖಂಡರು ಭಾಗಿಯಾಗಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















