ಬಳ್ಳಾರಿ/ ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದ ಗ್ರಾಪಂ ಮುಂಭಾಗದಲ್ಲಿ ಕೆಆರ್‌ಡಿಎಲ್ ಯೋಜನೆಯಡಿ ಸುಮಾರು 25 ರೂ. ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಗ್ರಾಮ ಪಂಚಾಯಿತಿಯ ಸಾರ್ವಜನಿಕ ಗ್ರಂಥಾಲಯವನ್ನು ಶಾಸಕ ಜೆ.ಎನ್.ಗಣೇಶ ಬುಧವಾರ ಉದ್ಘಾಟಿಸಿದರು.
ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಪಡೆದುಕೊಳ್ಳಲು ಯುವಕರು, ವಿದ್ಯಾರ್ಥಿಗಳು ಮುಂದಾಗಬೇಕು. ಸರಸ್ವತಿ ಒಲಿಯುವುದು ಕಷ್ಟ. ಆದ್ದರಿಂದ ದಿನನಿತ್ಯದಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡು ಸಾಗಿದರೆ, ಸರಸ್ವತಿ ಒಲಿಯಲು ಸಾಧ್ಯ. ಆಧುನಿಕ ಭಾರತದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದ್ದರಿಂದ ಶೈಕ್ಷಣಿಕವಾಗಿ ಅಭಿವೃದ್ಧಿಯಾಗುವ ಮೂಲಕ ಉಜ್ಚಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಿಡಿಒ ಹನುಮಂತಪ್ಪ, ಗ್ರಾ. ಪಂ ಅಧ್ಯಕ್ಷೆ ಈರಮ್ಮ ಪೂಜಾರಿ, ಉಪಾಧ್ಯಕ್ಷ ಎನ್.ನಾಗರಾಜ, ಸದಸ್ಯರಾದ ಕುಂಬಾರ ವಿರುಪಾಕ್ಷಪ್ಪ, ಬೂದಾಳ್ ರವಿಕುಮಾರ, ವಡ್ರು ಜಡೆಪ್ಪ, ಸೋಮಲಾಪುರ ಮಾರೇಶ,
ಮುಖಂಡರಾದ ಜಿ.ಮರೇಗೌಡ್ರು, ಉಪ್ಪಾರಹಳ್ಳಿ ಸತ್ಯಣ್ಣ, ಸುರೇಶಗೌಡ, ಚಂದಸಾಬ್, ಗೌಡ್ರು ಅಂಜಿನಪ್ಪ, ಎಇಇ ಸದಾನಂದಕುಮಾರ, ಗ್ರಂಥಪಾಲಕ ಗಿರೀಶ, ಸದಾನಂದಕುಮಾರ ಸೇರಿದಂತೆ ಅನೇಕರಿದ್ದರು.
ಶಾಲಾ ಕಟ್ಟಡ ಉದ್ಘಾಟನೆ :
ಮೊದಲಿಗೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಅನುದಾನದಲ್ಲಿ ನಿರ್ಮಿಸಿದ ಒಂದು ನೂತನ ಶಾಲಾ ಕಟ್ಟಡವನ್ನು ಶಾಸಕ ಗಣೇಶ್ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಗುರು ಎಚ್.ಪಿ.ಸೋಮಶೇಖರ ಸೇರಿದಂತೆ ಗ್ರಾಪಂಯ ಸರ್ವ ಸದಸ್ಯರು, ಮುಖಂಡರು, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















