ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಸ್ಟೀಸ್ ಸಭಾಹಿತ ಸ್ಮರಣೆ ಕಾರ್ಯಕ್ರಮ ಸಂಪನ್ನ

ಶಿರಸಿ: ಆಯುರ್ವೇದ ಚಿಕಿತ್ಸಾ ವ್ಯವಸ್ಥೆಯು ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ರೋಗಗಳ ತಡೆಗಟ್ಟುವಿಕೆಯನ್ನು ಉತ್ತೇಜಿಸುತ್ತದೆ. ಆಯುರ್ವೇದ ಚಿಕಿತ್ಸೆಯು ಐದು ಅಂಶಗಳು ಅಥವಾ ದೋಷಗಳನ್ನು ಸಮತೋಲನಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಡಾಕ್ಟರ್ ಕಿಶೋರಕುಮಾರ ರಾಜ ಪುರೋಹಿತ ತಿಳಿಸಿದರು.
ಅವರು ಶಿರಸಿಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜಸ್ಟೀಸ್ ಜಿ ಎನ್ ಸಭಾಹಿತ, ಜಸ್ಟೀಸ್ ವಿ ಜಿ ಸಭಾಹಿತ ಇವರ ಸ್ಮರಣಾರ್ಥ ಆರೋಗ್ಯಕ್ಕಾಗಿ ಆಯುರ್ವೇದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮುಂದುವರಿದು ಮಾನವನ ಜೀವಿತಾವಧಿಯನ್ನು ಹೆಚ್ಚಿಸುವುದು ಮತ್ತು ಪರಿಪೂರ್ಣ ಆರೋಗ್ಯವನ್ನು ಉತ್ತೇಜಿಸುವುದು ಆಯುರ್ವೇದದ ಎರಡು ಪ್ರಮುಖ ಉದ್ದೇಶಗಳು; ದೇಹದ ರೋಗ ಮತ್ತು ಅಸಾಮಾನ್ಯ ಕ್ರಿಯೆಯನ್ನು ನಿರ್ಮೂಲನೆ ಮಾಡುವುದು ಹೇಗೆ0ಬುದನ್ನು ತಿಳಿಸುತ್ತಾ,
ಸ್ವಸ್ಥ ವೃತ್ತ, (ಸದ್ವೃತ್ತ), ದಿನಚರ್ಯೆ, ಮತ್ತು, ಋತುಚರ್ಯೆ, ಎಂಬವು ಆಯುರ್ವೇದದಲ್ಲಿ ಬಹುಮೂಲ್ಯ ಅನುಸರಣೀಯಗಳು ಎಂದು ತಿಳಿಸಿದರು.

ಆಯುರ್ವೇದವು ಜೀವನ ಶೈಲಿ, ಆಹಾರ ಪದ್ಧತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಸಂಸ್ಕರಿಸಿದ ಆಹಾರ ಪದಾರ್ಥಗಳ ಬದಲಿಗೆ ನೈಸರ್ಗಿಕ ಅಥವಾ ಸಾವಯವ ಪದಾರ್ಥಗಳನ್ನು ಆರಿಸಿಕೊಳ್ಳಬೇಕೆ0ದು ಸಲಹೆ ನೀಡಿದರು. ಉಪನ್ಯಾಸದುದ್ದಕ್ಕೂ ತಮ್ಮ ವಿಸ್ತಾರವಾದ ಸಂಸ್ಕೃತ ಜ್ಞಾನ ಸಂಪತ್ತಿನಿಂದ ಆಧಾರಗಳನ್ನು ಉದಾಹರಿಸಿ
ಉತ್ತಮ ಜೀವನಶೈಲಿಯಿಂದ ಸುಲಭವಾದ ನೈಸರ್ಗಿಕ ಪರಿಹಾರಗಳನ್ನು ಕೊಂಡುಕೊಳ್ಳಲು ಪ್ರಯತ್ನಿಸಿ ಎಂದು ತಿಳಿಸಿದರು. ಸಂವಾದದಲ್ಲಿ ಎಲ್ ಜಿ ಭಟ್ಟಗದ್ದೆ, ಡಿ ಎಸ್ ಹೆಗಡೆ ಮುಂತಾದವರ ಸಂದೇಹಗಳಿಗೆ ಪರಿಹಾರ ಸೂಚಿಸಿದರು.

ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಲಯನ್ಸ್ ಕಾರ್ಯದರ್ಶಿ ಮನೋಹರ ಮಲ್ಮನೆ ಸನ್ಮಾನಿತ ಆದರ್ಶ ಶಿಕ್ಷಕ ಕೆ ಎಚ್ ಸುಬ್ರಹ್ಮಣ್ಯ ರವರನ್ನು ಮನೋಹರವಾಗಿ ಪರಿಚಯಿಸಿ ಆಶಯ ನುಡಿ ನುಡಿದರು.
ಸನ್ಮಾನ ಸ್ವೀಕರಿಸಿದ ಸುಬ್ರಹ್ಮಣ್ಯ ರವರು ತಮ್ಮ ಸಹೃದಯತೆಯ, ಸೌಜನ್ಯದ ಮಾತುಗಳಿಂದ ಬಳಗದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಹನುಮಂತ ಸಾಲಿ ಜಾನಪದ ಗೀತೆಗಳನ್ನು ಸುಮಧುರವಾಗಿ ಹಾಡಿ ಸಭಿಕರ ಮನತಣಿಸಿದರು. ಚುಟುಕು ಕವಿ ಲಕ್ಷ್ಮಣ ಶಾನಭಾಗರು ಸ್ವಾಗತಿಸಿ, ಪ್ರಾಸ್ತಾವನೆ ಮಾಡಿ, ಉಪನ್ಯಾಸಕರನ್ನು ಪರಿಚಯಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆ ಮಾತನಾಡಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು ಪತ್ರಿಕೆಗಳಿಗೆ ಪತ್ರಕರ್ತರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿ, ಉಪನ್ಯಾಸಕರಿಗೆ, ಸನ್ಮಾನಿತರಿಗೆ ಗೌರವಾರ್ಪಣೆ ಸಲ್ಲಿಸಿ ಸಭಿಕರೆಲ್ಲರಿಗೂ ವಂದಿಸಿದರು.
ಸಭೆಯಲ್ಲಿ ಲೇಖಕರಾದ ಕೆ ಎನ್ ಹೊಸಮನಿ, ಕೃಷ್ಣ ಪದಕಿ, ಉಮೇಶ ನಾಯ್ಕ ,ಭವ್ಯಾ ಹಳಿಯೂರ, ಶಿವರಂಜಿನಿ, ತ್ರಿವೇಣಿ ಹೆಗಡೆ, ಕೃಷ್ಣವೇಣಿ ಹೆಗಡೆ, ಪಾರ್ವತಿ ಹೆಗಡೆ, ಇಂದಿರಾ ಬೈಲಕೇರಿ, ಎಸ್ ಎಸ್ ಹೆಗಡೆ, ಎಸ್ ಮಂಜುನಾಥ್, ಕಾಶಿನಾಥ ಹೆಗಡೆ, ದೇವೇಂದ್ರಪ್ಪ ,ಶ್ರೀಧರ ಶಾಸ್ತ್ರಿ, ಆರ್ ಎಸ್ ಹೆಗಡೆ, ನಾರಾಯಣ ಪುರಾಣಿಕ, ಪ್ರಭಾತ ಹೆಗಡೆ ಹಾಗೂ ಸನ್ಮಾನಿತ ಕೆ ಎಚ್ ಸುಬ್ರಹ್ಮಣ್ಯ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!