ಒಂದೇ ಮನೆಯಲ್ಲಿ ಅರಳಿದ ಸೈನಿಕರ ಶಿಲೆಯ ಶಿಲ್ಪ/
ಚಿಕ್ಕವಯಸ್ಸಿನಲ್ಲಿ ಯೋಧರಾಗಿ ಸೇರಿದ ಅತ್ಯಂತ ಅಲ್ಪ
ಇವರ ಸಾಧನೆಯ ವಿವರಗಳನ್ನು ತಿಳಿಸಿ ಸಾಧ್ಯವಾದರೆ ಸ್ವಲ್ಪ/
ಒಂದೇ ವೀರತಾಯಿಯ ಮಕ್ಕಳು ನಾಲ್ಕುಜನ ಕಲ್ಪ//{೦೧}//
ಸಹೋದರತ್ವ ಸುಂದರ ಶಿಲೆಯಲ್ಲಿ ಅರಳಿದ ಶಿಲ್ಪಗಳು/
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುಲ್ಯಾಳೇಶ್ವರ ಶಿಲೆಗಳು
ಮೂವರಿಗೂ ಐದು ಹೆಣ್ಣು ಮಕ್ಕಳು ಶಿಲಾಬಾಲೆಗಳು/
ಹೆತ್ತ ನೆಚ್ಚಿನ ತಂದೆ ತಾಯಿಯರಿಗೆ ತ್ರಿಮೂರ್ತಿಗಳು//{೦೨}//
ಬಾಡದ ಬಳಗಾರ ಸಹೋದರರ ಆರಕ್ಷಕರ ದೇವಾಲಯ/
ಕುಟುಂಬದಲ್ಲಿ ರಥದ ಚಕ್ರದಂತೆ ಇರುವ ಭಾಸ್ಕರಾಲಯ/
ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಸಹೋದರರ ಆಲಯ/
ಅತೀ ಎತ್ತರದ ಸಾಧನೆಯ ಮಾಡಿದ ಬೆಳಗೊಳಾಲಯ//{೦೩}//
ಮಾತಿನಲ್ಲಿ ಸಂಗೀತದಂತೆ ನುಡಿಯುವ ಹಾಗೆ ಪೆಂಪು/
ಉಗ್ರರೊಂದಿಗೆ ನರಸಿಂಹನ ರೂಪದ ಕಂಪು/*
ಇಬ್ಬರು ಸೈನಿಕ ವೃತ್ತಿಯಿಂದ ನಿವೃತ್ತಿಹೊಂದಿದ ಚಿತ್ರಗಳ ಇಂಪು/
ಸಕ್ಕರೆಯ ನಾಡಿನ ಕೃಷ್ಣಾನದಿಯ ದಡದಲ್ಲಿರುವ ತಂಪು//{೦೪}//
✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರು.



















