ಬಳ್ಳಾರಿ/ ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಪಂಯ ಉಪ್ಪಾರಹಳ್ಳಿ ಗ್ರಾಮದ ಎಚ್‌ಎಲ್‌ಸಿ ಕಾಲುವೆ ಬಳಿಯ ಕಮಲಾಪುರ ರಸ್ತೆಯಲ್ಲಿರುವ ನೂತನ ಬಡಾವಣೆಯಲ್ಲಿ ನೆಲೆಸಿರುವ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ಬುಧವಾರ ಶಾಸಕ ಜೆ.ಎನ್.ಗಣೇಶ ಸಮ್ಮುಖದಲ್ಲಿ ವಿತರಿಸಲಾಯಿತು.
ನಂತರ ಶಾಸಕ ಜೆ.ಎನ್.ಗಣೇಶ ಮಾತನಾಡಿ, ಹಲವು ವರ್ಷಗಳಿಂದ ಹಕ್ಕು ಪತ್ರದ ಸಮಸ್ಯೆ ಇಲ್ಲಿನ ಕುಟುಂಬಗಳಿಗೆ ಕಾಡುತ್ತಿತ್ತು. ಆದರೆ, ಈಗ ಕಾಲ ಕೂಡಿ ಬಂದಿದ್ದು, ಇಲ್ಲಿನ 75 ಕುಟುಂಬಗಳ ಪೈಕಿ, ಈಗ 45 ಕುಟುಂಬಗಳಿಗೆ ಹಕ್ಕು ಪತ್ರ ನೀಡಿದ್ದು, ಇನ್ನುಳಿದ ಹಕ್ಕುಪತ್ರಗಳನ್ನು ಕೆಲವೇ ದಿನದಲ್ಲಿ ವಿತರಿಸಲಾಗುವುದು. ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಸುಂದರವಾಗಿರಬೇಕು. ಈ ನಿಟ್ಟಿನಲ್ಲಿ ಹಲವು ವರ್ಷಗಳ ಕನಸು ನನಸಾದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ನಾಗಮ್ಮ, ಪಿಡಿಒ ಬೀರಲಿಂಗ, ಕಾರ್ಯದರ್ಶಿ ಹುಲುಗಪ್ಪ, ಮುಖಂಡರಾದ ಹನುಮಗೌಡ, ಎಂ.ಜಡೆಪ್ಪ, ಜಗದೀಶ, ಕುಮಾರಸ್ವಾಮಿ, ಎನ್.ಗಿರೀಶ್, ದೇವೇಂದ್ರಪ್ಪ, ಹೊನ್ನಳ್ಳಿ ಗಂಗಾಧರ, ಯು.ತಿಮ್ಮಪ್ಪ, ಹನುಮಮ್ಮ, ಜಯಲಕ್ಷಿ, ಸಿ.ಡಿ.ಗುಂಡಮ್ಮ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















