ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿಯವರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದ ತಾಲೂಕು ದಂಡಾಧಿಕಾರಿ ಶ್ರೀ ಮಲ್ಲಣ್ಣ ಯಲಗೋಡ್

ಕಲಬುರಗಿ/ ಜೇವರ್ಗಿ: ತಾಲೂಕಿನ ಮಿನಿ ಸೌಧದಿಂದ ಸಜ್ಜನ ಕಲ್ಯಾಣ ಮಂಟಪದವರೆಗೆ ಫ.ಗು.ಹಳಕಟ್ಟಿಯವರ ವಚನ ಗ್ರಂಥಗಳು ಹಾಗೂ ಪೂಜ್ಯರ ಸಾರೋಟ ಮೆರವಣಿಗೆಯು ಕನ್ನಡಾಭಿಮಾನಿಗಳ ಮನಸೆಳೆದವು.
ತಾಲೂಕು ದಂಡಾಧಿಕಾರಿ ಕನ್ನಡ ಬಾವುಟ ಹಿಡಿದು ಸಾರೋಟ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಮಹಾಂತ ಮಹಾ ಸ್ವಾಮಿಗಳು ವಿರಕ್ತ ಮಠ ಜೇರಟಗಿ, ಡಾ. ಅಲ್ಲಮಪ್ರಭು ದೇಶಮುಖ ಹಾಗೂ ಕೆ ಎಸ್ ಕೋಬಾಳ ಸಾರೋಟನಲ್ಲಿ ಉಪಸ್ಥಿತರಿದ್ದರು.
ಹಾಗೂ ಈ ಮೆರವಣಿಗೆ ಕಾರ್ಯಕ್ರಮದಲ್ಲಿ ಷಣ್ಮುಖಪ್ಪ ಸಾಹೂ ಗೋಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಂಗಣಗೌಡ ಪಾಟೀಲ್,ಶ್ರೀ ಶಂಬುಲಿಂಗ ದೇಸಾಯಿ, ಪಶು ವೈದ್ಯಾಧಿಕಾರಿ ಸೋಭಾ ಸಜ್ಜನ್ ,ಸೊಮಶೇಖರಗೌಡ ಪಾಟೀಲ್,ಡಾ. ಪಿ ಎಂ ಮಠ, ಚಂದ್ರಶೇಖರ ತುಂಬಗಿ,ಪಿಎಸ್ ಐ ಗಜಾನಂದ ಬಿರಾದಾರ, ಮರೆಪ್ಪ ಸರಡಗಿ, ಸಾಯಿ ಕಾಲೇಜಿನ ಪ್ರಾಚಾರ್ಯರಾದ ಅಮಿನಪ್ಪ ಇಜೇರಿ,ಗ್ರಾಮ ಲೆಕ್ಕಾಧಿಕಾರಿ ಗೌಡಪಗೌಡ ಪಾಟೀಲ್,ಪರಸುರಾಮ ಪಾಟೀಲ್, ಅಂಬ್ರೇಶ್ ಚವ್ಹಾಣ ಹಾಗೂ ಶಾಂತಲಿಂಗ ಪಾಟೀಲ್ ಕೋಳಕೂರ, ಮಹಾಲಕ್ಷ್ಮೀ ಮಹಿಳಾ ಕಾಲೇಜಿನ ವಿದ್ಯಾರ್ಥಿ ಹಾಗೂ ಶಿಕ್ಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿ ಶಿಕ್ಷಕರು ಹಾಗೂ ದಾನಮ್ಮ ಕಾಲೇಜಿನ ವಿದ್ಯಾರ್ಥಿ ಶಿಕ್ಷಕರು ಕಣ್ಮನ ಸೆಳೆಯುವ ಅಲಂಕೃತವಾದ ಮಹಾನ್ ದೇಶಭಕ್ತರ ಛದ್ಮವೇಶಗಳನ್ನು ಅಲಂಕರಿಸಿ ಭಾಗವಹಿಸಿದರು.
ಮೆರವಣಿಗೆ ಮುಗಿದ ನಂತರ ಪೂಜ್ಯರನ್ನು ವೇದಿಕೆಗೆ ಸ್ವಾಗತಿಸಿ ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಗಣ್ಯಮಾನ್ಯರಿಂದ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು ನಂತರ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕೆ ಎಸ್ ಕೋಬಾಳ ಸೊನ್ನ ಅವರು ಗಣ್ಯ ಮಾನ್ಯರನ್ನು ಸ್ವಾಗತ ಕೋರಿದರು.
ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಶರಣಬಸವ ಸ್ವಾಮಿಗಳು ಚರಂತೇಶ್ವರ ವಿರಕ್ತ ಮಠ ಬಸವ ಬೆಳವಿ ಹಾಗೂ ತಾಲೂಕಿನ ಶಾಸಕರಾದ ಡಾಃ ಅಜಯ ಧರ್ಮಸಿಂಗ್ ಅವರ ಸಹೋದರ ಶಿವಲಾಲ್ ಸಿಂಗ್, ರಾಜಶೇಖರ ಸೀರಿ,ವಿಜಯಕುಮಾರ ಹಿರೇಮಠ,ಶಿವರಾಜ ಪಾಟೀಲ್ ರದ್ದೆವಾಡಗಿ ಹಾಗೂ ಅತಿಥಿ ಮೋಹನ್ನರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು ನಂತರ ದಿವ್ಯ ಸಾನಿದ್ಯ ವಹಿಸಿದ ಪೂಜ್ಯ ಶ್ರೀ ಶರಣ ಬಸವ ಸ್ವಾಮಿಗಳು ಫ.ಗು.ಹಳಕಟ್ಟಿಯವರ ಜಯಂತಿ ಯಾಕೆ ಆಚರಿಸುತ್ತೇವೆ, ಫ.ಗು ಹಳಕಟ್ಟಿಯವರು ವಚನಗಳಿಗೆ ಕೊಟ್ಟ ಕೊಡುಗೆಯೇನು? ಫ.ಗು ಹಳಕಟ್ಟಿಯವರ ಸಂಶೋಧನೆಯಿಂದ ಇಂದು ನಾವು ವಚನಗಳು ನೋಡಲಿಕ್ಕೆ ,ಓದಲಿಕ್ಕೆ ಹೇಗೆ ಸಾಧ್ಯವಾಗಿವೆ ಎಂದು ಅರ್ಥಗರ್ಭಿತವಾಗಿ ಸವಿವರವಾಗಿ ಹೇಳಿದರು.
ಮತ್ತೆ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ SSLC ಹಾಗೂ PUC ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದ ಸಾಧಕರಿಗೆ ವಚನ ಸೇವಾ ರತ್ನ ಪ್ರಶಸ್ತಿ ನೀಡಿ ಅವರ ಸಾಧನೆಯ ಹಾದಿಯ ಬಗ್ಗೆ ಕ.ಸಾ.ಪ ಅಧ್ಯಕ್ಷ ಶ್ರೀ ಎಸ್ ಕೆ ಬಿರಾದಾರ ಅವರ ಬಗ್ಗೆ ಸವಿಸ್ತಾರವಾಗಿ ಹೇಳಿ ಗೌರವಿಸಿದರು.
ಈ ಪ್ರಶಸ್ತಿಗೆ ಭಾಜನರಾದ ಮಹನೀಯರೆಂದರೆ ಪೂಜ್ಯ ಶ್ರೀ ಮಹಾಂತ ಮಹಾ ಸ್ವಾಮಿಗಳು ವಿರಕ್ತ ಮಠ ಜೇರಟಗಿ, ಡಾಕ್ಟರ್ ಅಲ್ಲಮ ಪ್ರಭು ದೇಶಮುಖ ಆಡಳಿತ ಅಧಿಕಾರಿಗಳು ಶ್ರೀ ಶರಣಬಸವೇಶ್ವರ ಸಂಸ್ಥಾನ ಮಠ ಕಲಬುರಗಿ, ಶ್ರೀ ವಿಜಯಕುಮಾರ್ ಪಾಟೀಲ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಕಲಬುರಗಿ, ಡಾಕ್ಟರ್ ಧರ್ಮಣ್ಣ ಕೆ ಬಡಿಗೇರ್ ಪ್ರಾಚಾರ್ಯರು ಮಹಾಲಕ್ಷ್ಮೀ ಮಹಿಳಾ ಕಾಲೇಜ್ ಜೇವರ್ಗಿ, ಉದ್ಯಮಿದಾರರಾದ ಬಾಪುಗೌಡ ಬಿರಾಳ, ಬಸನಗೌಡ ಪಾಟೀಲ್ ಮಾಗಣಗೇರಾ, ಶಿವಲಿಂಗಪ್ಪಗೌಡ ಪಾಟೀಲ್ ಹರನಾಳ ಕೆ, ಹೀಗೆ ಹತ್ತು ಹಲವಾರು ಸಾಧಕರಿಗೆ “ವಚನ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದ ಸ್ವಾಗತವನ್ನು ಕೆ ಎಸ್ ಕೋಬಾಳ ಸೊನ್ನ ಹಾಗೂ ನಿರೂಪಣೆ ಡಾ: ಹಣಮಂತ್ರಾಯ ರಾಂಪೂರೆ ಹಾಗೂ ಕವಿತಾ ಹಳ್ಳಿ ನಿರೂಪಣೆ ಹಾಗೂ ಬಿ ಜಿ ಹೂಗಾರ ಕಾರ್ಯಕಮಕ್ಕೆ ವಂದನಾರ್ಪಣೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್ ಕೆ ಬಿರಾದಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಜೇವರ್ಗಿ,ಗೌರವ ಅಧ್ಯಕ್ಷರಾದ ಚನ್ನಮಲ್ಲಯ್ಯ ಹಿರೇಮಠ,ಗೌರವ ಕಾರ್ಯದರ್ಶಿಗಳು ಹಾಗೂ ಸಮಾಜ ಸೇವಕರಾದ ಕಲ್ಯಾಣಕುಮಾರ ಸಂಗಾವಿ ಗಂವಾರ,ಗೌರವ ಕಾರ್ಯದರ್ಶಿಗಳಾದ ಶ್ರೀ ಹರಿ ಕರಕಿಹಳ್ಳಿ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಧರ್ಮಣ್ಣ ಕೆ ಬಡಿಗೇರ್,ಎಸ್ ಟಿ ಬಿರಾದಾರ,ಬಂಗಾರೆಪ್ಪ ಆಡಿನ,ಚಂದ್ರಶೇಖರ ಪಾಟೀಲ್,ತಾನಾಜಿ ಕಂಬಳೆ,ಡಾಃ ಹಣಮಂತ್ರಾಯ ರಾಂಪೂರೆ ಹಾಗೂ ಎ ಸಿ ಹರವಾಳ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ವರದಿ: ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!