
ಬೆಳಗಾವಿ|| ಅಥಣಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಕೆರೆಯಿಂದ 8 ಕೆರೆಗಳಿಗೆ ನೀರು ತುಂಬಿಸುವ ಝಂಜರವಾಡ ಏತ ನೀರಾವರಿ ಯೋಜನೆಯ 2ನೇ ಹಂತದ ಕಾಮಗಾರಿಗೆ ಪ್ರಾಯೋಗಿಕ ಚಾಲನೆ ಸಮಾರಂಭವನ್ನು ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ನೆರೆವೇರಿಸಿದ ನಂತರ ಯಲ್ಲಮ್ಮವಾಡಿ ಕೆರೆಗೆ ಬಾಗಿನವನ್ನು ಅರ್ಪಿಸಿದರು.
ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲದ ನೀರಿನ ಮಟ್ಟ ಹೆಚ್ಚಾಗಿ ಕೊಳವೆಬಾವಿ ಬಾವಿಗಳ ನೀರಿನ ಮಟ್ಟ ಸುಧಾರಿಸುವುದು ಇದರಿಂದಾಗಿ ರೈತರಿಗೆ ವ್ಯವಸಾಯ ಮಾಡಲು ಅನುಕೂಲವಾಗುವುದು ಎಂದು ಶಾಸಕರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ, ಶ್ರೀ ಎಸ್. ಬಿ.ಕಮತಗಿ, ಮಾಜಿ ಜಿ.ಪಂ ಸದಸ್ಯರಾದ ಶ್ರೀ ಗುರು ದಶ್ಯಾಳ, ಶ್ರೀ ಶಿವರಾಯ ಯಲಡಗಿ,ಶ್ರೀ ಶಿವಾನಂದ ದಿವಾನಮಳ, ಗ್ರಾ.ಪಂ. ಕೊಕಟನೂರ ಅಧ್ಯಕ್ಷರಾದ ಶ್ರೀಮತಿ ಶಾನಕ್ಕ ಪೂಜಾರಿ ಹಿರಿಯ ಮುಖಂಡರಾದ ಶ್ರೀ ಶೇಖರ ನೇಮಗೌಡ, ಶ್ರೀ ಬಸವರಾಜ ಸಿಂಧೂರ, ಶ್ರೀ ಮಹದೇವ ಬಿಳಿಕುರಿ, ಶ್ರೀ ಅರ್ಜುನ ಪೂಜಾರಿ, ಶ್ರೀ ಶಾಂತಿನಾಥ ನಂದೇಶ್ವರ, ಇ ಇ ಶ್ರೀ ಗುರುಬಸವರಾಜಯ್ಯ ಹಾಗೂ ಅಥಣಿ ಪುರಸಭೆ ಸರ್ವ ಸದಸ್ಯರು ಮತ್ತು ಹಾಗೂ ರೈತ ಬಾಂಧವರು ಅಪಾರ ಜನೋಸ್ತಮ ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ



















