ಯಾದಗಿರಿ : ಗುರುಮಠಕಲ್ ತಾಲೂಕಿನ ಮಾಧವಾರ ಹಾಗೂ ಯಾದಗಿರಿ ತಾಲೂಕಿನ ಅರಿಕೇರಾ.ಕೆ ಈ ಎರಡು ಗ್ರಾಮಗಳ ಮೊಹರಮ್ ಆಚರಣೆಗೆ ತಡೆ.
ಗುರುಮಠಕಲ್ ತಾಲೂಕಿನ ಸೈದಾಪುರ ಠಾಣಾ ವ್ಯಾಪ್ತಿಯ ಮಾಧವಾರ ಗ್ರಾಮದಲ್ಲಿ ಮೊಹರಂ ಹಬ್ಬದ ಸಮಯದಲ್ಲಿ ಕುಣಿಯುವುದನ್ನು ಹಾಗೂ ಯಾದಗಿರಿ ತಾಲೂಕಿನ ಅರಿಕೇರಾ ಕೆ. ಗ್ರಾಮದಲ್ಲಿ ಗುಂಪು ಘರ್ಷಣೆ ಆಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಮೆರವಣಿಗೆಗೆ ಇನ್ನಿತರ ಚಟುವಟಿಕೆಗೆ ತಡೆ.
ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರನ್ವಯ ಗುರುಮಠಕಲ್ ತಾಲ್ಲೂಕಿನ ಮಾಧವಾರ ಗ್ರಾಮದಲ್ಲಿ ಹಾಗೂ ಯಾದಗಿರಿ ತಾಲೂಕಿನ ಅರಕೇರಾ ಕೆ. ಗ್ರಾಮದಲ್ಲಿ ಶಾಂತಿ, ಕಾನೂನು ಮತ್ತು
ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ 2025ರ ಜುಲೈ 4 ರಿಂದ 8ರ ವರೆಗೆ ಆಚರಿಸಲಿರುವ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಈ ಗ್ರಾಮದಲ್ಲಿ ಸಾರ್ವಜನಿಕವಾಗಿ ಮೆರವಣಿಗೆಯನ್ನು ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















