ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿಮ್ಮ ಬರಹಕ್ಕೆ ಪುಸ್ತಕಗಳ ಉಡುಗೊರೆ

ಈ ಯುಗದಲ್ಲಿ ಸೋಷಿಯಲ್ ಮೀಡಿಯಾ ಅಂದರೆ ಎಲ್ಲರಿಗೂ ಕ್ರೇಜ್. ದೊಡ್ಡವರೇ ಇರಲಿ ಚಿಕ್ಕವರೇ ಇರಲಿ ಎಲ್ಲರೂ ಸಕ್ರಿಯರಾಗಿದ್ದಾರೆ, ಕೆಲವರಿಗೆ ಜೀವನದ ಒಂದು ಭಾಗವೇ ಆಗಿದೆ. ಕೆಲವರಿಗೆ ಮನರಂಜಿಸಲು, ಹಣ ಸಂಪಾದನೆ ಮಾಡಲು ಇನ್ನೂ ಕೆಲವರಂತೂ ಅದರಿಂದ ತುಂಬಾ ತೊಂದರೆ ಅನುಭವಿಸಿದವರು ಇದ್ದಾರೆ. ಹಾಗೆಯೇ ಕೆಲವರು ಸೋಷಿಯಲ್ ಮೀಡಿಯಾದಿಂದ ಸಮಾಜಕ್ಕೆ ಕೊಡುಗೆಯಾಗಿ ಬಳಸಿಕೊಂಡವರೂ ಇದ್ದಾರೆ.

ಇನ್ಸ್ಟಾಗ್ರಾಮ್ ಒಂದು ಅಮೆರಿಕದ ಸಾಮಾಜಿಕ ಜಾಲತಾಣದ ವೇದಿಕೆಯಾಗಿದೆ. ಇನ್ಸ್ಟಾಗ್ರಾಮ್ ಬಗ್ಗೆ ಯಾಕೆ ಹೇಳುತ್ತಾ ಇದ್ದೇನೆ ಅಂತಾ ಯೋಚಿಸತ್ತಾ ಇದ್ದೀರಾ ಇನ್ಸ್ಟಾಗ್ರಾಮ್ ಅಲ್ಲಿ ಕರ್ನಾಟಕದವರು ಕನ್ನಡದವರು (karnatakadavaru kannadavaru) ಅಂತಾ ಒಂದು ಪೇಜ್ ಇದೆ, ಈ ಪೇಜ್ ಹೆಸರಲ್ಲಿಯೇ ಕರ್ನಾಟಕ, ಕನ್ನಡದ ಮೇಲಿನ ಪ್ರೇಮವೇ ಕಾಣುತ್ತದೆ. ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ” ಕನ್ನಡದವರು ಕರ್ನಾಟಕದವರು ” ಅನ್ನುವ ಹೆಸರಲ್ಲಿ 26 ಜುಲೈ 2018 ಖಾತೆಯನ್ನು ಓಪನ್ ಮಾಡಿ ಬರೆಯುವ ಅನೇಕರರಿಗೆ ವೇದಿಕೆಯಾಗಿ ಮಾಡಿಕೊಟ್ಟು ಅವರ ಬರಹವನ್ನು ಪ್ರಕಟಿಸುತ್ತಾ ಬರಹಗಾರರಿಗೆ ಅನೇಕ ಕವನ ಸ್ಪರ್ಧೆಯನ್ನು ಏರ್ಪಡಿಸಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೂ ತುಂಬಾ ಲೈಕ್ಸ್ ಪಡೆದ ಬರಹಗಾರರಿಗೂ, ಉತ್ತಮ ಬರಹಗಾರರಿಗೂ ಬಹುಮಾನ ರೂಪವಾಗಿ ಪುಸ್ತಕಗಳನ್ನು ನೀಡುತ್ತಿದ್ದಾರೆ.
ಚಾಣಕ್ಯರ ಪ್ರಕಾರ, ದಾನವೆಂದರೆ ಕೇವಲ ಹಣವನ್ನು ಸಹಾಯ ರೂಪದಲ್ಲಿ ನೀಡುವುದು ಮಾತ್ರವಲ್ಲ, ದಾನದ ನಿಜವಾದ ಅರ್ಥವೆಂದರೆ ಸೇವೆಗೆ ತನ್ನ ಶಕ್ತಿ, ಸಮಯ ಮತ್ತು ಸಂಪನ್ಮೂಲಗಳನ್ನು ನಿಸ್ವಾರ್ಥವಾಗಿ ಕೊಡುಗೆ ನೀಡುವುದಾಗಿದೆ. ದಾನ ಮಾಡುವುದರಿಂದ ಆತ್ಮದ ಶುದ್ಧೀಕರಣ ಮತ್ತು ಸಂಪತ್ತಿನ ಜೊತೆಗೆ ಸಂತೋಷವನ್ನು ಪಡೆಯಬಹುದು ಎಂದು ಚಾಣಕ್ಯರು ಹೇಳಿದ್ದಾರೆ.

ಅನ್ನದಾನ, ವಿದ್ಯಾದಾನದ ಹಾಗೆಯೇ ಪುಸ್ತಕ ದಾನವೂ ಶ್ರೇಷ್ಠವಾದ ದಾನ. ಕೆಲವರು ಚಿಕ್ಕ ಸಹಾಯ ಮಾಡಿದರೂ ಎಲ್ಲರಿಗೂ ಹೇಳುತ್ತಾರೆ ಯಾರಿಗೂ ಹೇಳದೇ ಯಾರಿಂದಲೂ ಹಣವನ್ನು ಪಡೆಯದೆ ” ಕರ್ನಾಟಕದವರು ಕನ್ನಡದವರು ” ಪೇಜ್ ನ ಮೂಲಕ ಬರಹಗಾರರ ಬರಹವನ್ನು ಪ್ರಕಟಿಸಿ ಪುಸ್ತಕದ ಉಡುಗೊರೆ ನೀಡುತ್ತಿರುವುದು ಶ್ಲಾಘನೀಯ, ಪುಸ್ತಕ ಪಡೆದುಕೊಂಡ ಬರಹಗಾರರು ಅಂಜಲಿ ಶ್ರೀನಿವಾಸ, ಪಲ್ಲವಿ ಚೆನ್ನಬಸಪ್ಪ , ಪೂರ್ಣೀಮಾ, ನವೀನ್ ಹೂಗಾರ್, ಧನು ಪೂಜಾರಿ ,ಹರ್ಷ ಹೀಗೆ ಬರೀತಾ ಹೋದರೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ ಅಂತೂ ತುಂಬಾ ಬರಹಗಾರರು ಪುಸ್ತಕಗಳನ್ನು ಪಡೆದುಕೊಂಡಿದ್ದಾರೆ. ಪುಸ್ತಕಗಳಿಲ್ಲದ ಕೋಣೆ ಆತ್ಮವಿಲ್ಲದ ಶರೀರದಂತೆ ಪುಸ್ತಕದ ಮೌಲ್ಯ ಮತ್ತು ಸಾರ್ಥಕತೆಯನ್ನು ತಿಳಿಸಿಕೊಡುವಲ್ಲಿ ಹಾಗೆಯೇ ಜೀವನದ ಬಗ್ಗೆ ಭರವಸೆ ಮೂಡಿಸುವಲ್ಲಿ ಪುಸ್ತಕದ ಪಾತ್ರ ದೊಡ್ಡದು. ಪುಸ್ತಕ ನಮ್ಮ ಜ್ಞಾನ ವಿಕಾಸಕ್ಕೆ ದಾರಿದೀಪವಾಗಿದೆ. ಪುಸ್ತಕಗಳು ನಮ್ಮ ಬದುಕು ಬೆಳಗುತ್ತದೆ. ಹಾಗೆಯೇ ಜ್ಞಾನವನ್ನು ಹೆಚ್ಚಿಸುತ್ತದೆ. ಪುಸ್ತಕಗಳು ಮನುಷ್ಯನಿಗೆ ಜ್ಞಾನದ ಜೊತೆ ವ್ಯಕ್ತಿತ್ವವನ್ನು ಅರಳಿಸುತ್ತದೆ.ಯೋಚನಾ ಶಕ್ತಿ ಕಲಾತ್ಮಕತೆ ಮನಸ್ಸಿನ ಭಾವನೆಗಳು ವ್ಯಕ್ತಿತ್ವ ಹಾಗೂ ಸಂಸ್ಕಾರಗಳನ್ನು ಒರೆಗೆ ಹಚ್ಚಿ ಅವನನ್ನು ಸುಸಂಸ್ಕೃತ ಹಾಗೂ ಸಮಾಜಕ್ಕೆ ಯೋಗ್ಯ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಬರಹಗಾರರ ಬರಹವನ್ನು ಪ್ರಕಟಿಸಿ ಪ್ರೋತ್ಸಾಹಿಸುವುದು ಮಾತ್ರವಲ್ಲದೇ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುತ್ತಿದ್ದಾರೆ ಇವರು ಮಾಡಿದ ಸಣ್ಣ ಸೇವೆ ಮರೆಯಾದರೂ ಎಂದೋ ಒಂದು ದಿನ ಯಾರೋ ಒಬ್ಬರ ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಹುದು. ಒಬ್ಬ ಬರಹಗಾರರಿಗೆ ಮತ್ತೊಬ್ಬರನ್ನು ಬೆಳೆಸಬೇಕೆಂಬ ವಿಶಾಲ ಮನಸ್ಸು ಎಲ್ಲರಲ್ಲೂ ಬರೋದಿಲ್ಲ ಮೊದಲು ಶುರು ಮಾಡಿದ ಕೂಡಲೇ ಕೊನೆಗೊಳಿಸುವವರು ಇದ್ದಾರೆ ಇವರು ಸತತವಾಗಿ ಏಳು ವರ್ಷಗಳಾದರೂ ಇನ್ನೂ ಈ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ನೀವು ನೀಡುವ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಧ್ಭುತ ಬರಹಗಾರನ್ನು ತರಲಿ ಇದರ ಸದುಪಯೋಗವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಲಿ ನಿಮ್ಮ ಸೇವೆ ಹೀಗೆ ಮುಂದುವರಿಯಲಿ…

  • ರೇಷ್ಮಾ ಶೆಟ್ಟಿ, ಕುಂದಾಪುರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!