ಯಾದಗಿರಿ/ ಗುರುಮಠಕಲ್: ತಾಲೂಕಿನ ಕಾಳಿಬೆಳಗುಂದಿ ಗ್ರಾಮ ಪಂಚಾಯತಿಯಲ್ಲಿ ಸಿಬ್ಬಂದಿಗಳಾದ ಚಂದ್ರಶೇಖರ ತಂದೆ ಬನ್ನಪ್ಪ, ಶಂಕ್ರಪ್ಪ ತಂದೆ ನರಸಪ್ಪ, ಅಶಪ್ಪ ತಂದೆ ಮಲ್ಲಪ್ಪ, ಅಂಜಪ್ಪ ತಂದೆ ಬಸಪ್ಪ ಇವರು ಗ್ರಾಮ ಪಂಚಾಯತಿಯಲ್ಲಿ ಪಂಪ್ ಅಪರೇಟರ್ ಗಳಾಗಿ ಗುತ್ತಿಗೆ ಅಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಗಳಿಗೆ
ನೀಡುವ ವೇತನ ದುರ್ಬಳಕೆ ಮಾಡಿಕೊಂಡು ಅವರ ಮಾಸಿಕ ವೇತನಕ್ಕೆ ಕಂಟಕ ತಂದಿದ್ದಾರೆ.
ಸಮಗ್ರ ಮಾಹಿತಿ:
ನಾಲ್ಕು ಜನರ ಖಾತೆಗಳಿಗೆ ಮುಂಗಡವಾಗಿ ವೇತನ ಜಮಾ ಮಾಡಿ ಅದನ್ನು ಪಂಚಾಯತಿ ಮೆಟೆರಿಯಲ್ ಕೆಲಸಕ್ಕಾಗಿ ಬಂದಿರುವ ಹಣ ಎಂದು ನಂಬಿಸಿ ಅವರಿಂದ ಬೇರೆ ಬೇರೆ ಖಾತೆಗಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೃತಿ ಗಂಡ ವೆಂಕಟೇಶ್ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವ ಶರಣಪ್ಪ ಅಲ್ಲಿಪುರ ಆದೇಶದಂತೆ ಹಣ ವರ್ಗಾವಣೆ ಮಾಡಿದ್ದಾರೆ, ತಿಂಗಳುಗಳೇ ಕಳೆದರೂ ವೇತನವಾಗದೆ ಇರುವುದನ್ನು ಪ್ರಶ್ನಿಸಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆದಾಗ ವೇತನ ಪುಸ್ತಕದಲ್ಲಿ ಸಿಬ್ಬಂದಿಗಳ ವೇತನ ಪಾವತಿಸಲಾಗಿದೆ ಎಂದು ಕಂಡು ನಿಬ್ಬೆರಗಾಗಿದ್ದಾರೆ ಸಿಬ್ಬಂದಿ.
ಒಟ್ಟು ರೂ. 99,886/- ರಂತೆ ಒಟ್ಟು 04 ಜನರಿಗೆ ಒಟ್ಟು ರೂ.3,99,544/-ಹಣವನ್ನು ವೇತನ ಪುಸ್ತಕದಲ್ಲಿ ಸಿಬ್ಬಂದಿ ನಕಲಿ ಸಹಿ ನಮೂದಿಸಿ ಬಡ ಸಿಬ್ಬಂದಿಗಳಿಗೆ ಮೋಸ-ವಂಚನೆ ಮಾಡಿದ್ದಾರೆ.
ಆಸಕ್ತಿಕರ ವಿಷಯ ಎನ್ನುವಂತೆ ತನಿಖೆ ವರದಿಯಲ್ಲಿ ಪಿಡಿಓ ರವರ ಹೇಳಿಕೆಯಲ್ಲಿ ನಾನು ನನ್ನ ಸಂಸಾರದ ಸಲುವಾಗಿ 2 ಲಕ್ಷ ಮಾತ್ರ ಇಬ್ಬರಿಂದ ಮಾತ್ರ ಒಪ್ಪಿಗೆಯಂತೆ ಪಡೆದಿರುತ್ತೇನೆ ಎಂದು ಹೇಳಿಕೆ ನೀಡಿರುತ್ತಾರೆ, ಒಪ್ಪಿಗೆ ಮೇಲೆ ನೀಡಿದ್ದರೆ ನಿಮ್ಮ ಮೇಲೆ ಕ್ರಮ ಆಪರೇಟರ್ ಗಳು ಯಾಕೆ ಅವರ ಮೇಲೆ ದೂರು ನೀಡಿರುವುದು ಇವರ ಭ್ರಷ್ಟಚಾರದ ಕುರಿತು ಪುರಾವೆಯಾಗಿದೆ.
ಈ ಕುರಿತಾಗಿ ವಂಚನೆಗೆ ಒಳಗಾದ ಸಿಬ್ಬಂದಿಗಳು ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕರ ಗಮನಕ್ಕೆ ತಂದು ಮನವಿ ನೀಡಿದ ಪ್ರಯುಕ್ತ ತನಿಖಾ ಅಧಿಕಾರಿಗಳು ವರದಿ ಸಲ್ಲಿಸಿ 6 ತಿಂಗಳಾದರೂ ಕೂಡಾ ಇನ್ನೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಕೂಡಲೇ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ ಅಲ್ಲಿಪುರ ಅವರನ್ನು ತಕ್ಷಣ ವಜಾಗೊಳಿಸಿ, ಸದರಿ ಹಣ ಮರಳಿ ವಾಪಾಸು ಪಡೆದು ಕ್ರಮಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಜಿಲ್ಲಾ ಘಟಕ ಹಾಗೂ ಗುರುಮಠಕಲ್ ತಾಲೂಕ ಜಯ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾ ಪಂಚಾಯತಿ ಕಛೇರಿ ಮುಂದೆ ಉಗ್ರವಾದ ಹೋರಾಟ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ನಾಗೇಶ್ ಗದ್ದಗಿ ಗುರುಮಠಕಲ್ ತಾಲೂಕ ಅಧ್ಯಕ್ಷರು ತಿಳಿಸಿದ್ದಾರೆ.
ಕಠಿಣವಾಗಿ ಶಿಕ್ಷೆ ಆದರೆ ಮಾತ್ರ ಇನ್ನೊಬ್ಬರಿಗೆ ಪಾಠವಾಗುತ್ತೆ, ಇಲ್ಲವಾದರೆ ಇಂತಹ ಕೃತ್ಯಗಳು ದಿನಕ್ಕೊಂದು ಮರುಕಳಿಸುತ್ತವೆ.
ವರದಿ: ಜಗದೀಶ್ ಕುಮಾರ್ ಭೂಮಾ



















