ಮೈಸೂರು/ ಪಿರಿಯಾಪಟ್ಟಣ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ .ಟ್ರಸ್ಟ್ ಬೆಟ್ಟದಪುರ ಯೋಜನಾ ಕಚೇರಿ ವ್ಯಾಪ್ತಿಯ ಕಿತ್ತೂರು ವಲಯದ ಸರ್ಕಾರಿ ಪ್ರೌಢಶಾಲೆ ಹಂಡಿತವಳ್ಳಿ ಈ ದಿನ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಕಿರಣ್ ಕುಮಾರ್ ಅವರು ನಡೆಸಿಕೊಟ್ಟರು, ಶಿಕ್ಷಕರಾದ ರಾಜೇಶ್ k. r ಅವರು ಸ್ವಾಗತ ಮಾಡಿದರು.
ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಲತಾ m. k, sdmc ಅಧ್ಯಕ್ಷರಾದ ನಾಗರಾಜ್, ಪತ್ರಕರ್ತರಾದ H. R ಶಂಕರ್, ಒಕ್ಕೂಟ ಅಧ್ಯಕ್ಷರಾದ ರಾಜಾಮೂರ್ತಿ, ವಲಯ ಮೇಲ್ವಿಚಾರಕರಾದ ದಾಮೋದರ್, ಸೇವಾಪ್ರತಿನಿಧಿ ಚಂದ್ರು, ಶಿಕ್ಷಕರಾದ ನಟೇಶ್ k.N ಅವರು ಸಭೆಯಲ್ಲಿ ಭಾಗವಹಿಸಿ ಗಿಡಗಳ ನಾಟಿಯಿಂದ ಆಗುವ ಪ್ರಯೋಜನಗಳನ್ನು ಮಾಹಿತಿ ನೀಡಿದರು.
ಕೃಷಿ ಮೇಲ್ವಿಚಾರಕರಾದ ವಿನಾಯಕ್ ಪಿ ಅವರು ಪರಿಸರದ ಬಗ್ಗೆ ಮಾತನಾಡಿದರು ಮಕ್ಕಳಿಗೆ ಪರಿಸರದ ಬಗ್ಗೆ ಸ್ಪರ್ಧೆ ಮಾಡಿ ಬಹುಮಾನ ವಿತರಣೆ ಮಾಡಲಾಯಿತು , ಶಾಲೆಯ ಎಲ್ಲಾ ಶಿಕ್ಷಕರು ,ಸಂಘದ ಸದಸ್ಯರು, ಗ್ರಾಮಸ್ಥರು ಹಾಗೂ ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಹಾಗೂ ಗಿಡಗಳ ನಾಟಿ ಮಾಡಲಾಯಿತು.
ವರದಿ ಹೆಚ್.ಆರ್. ಶಂಕರ್



















