
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಮಲಗಾಣ ಗ್ರಾಮದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಶಾದಿ ಮಹಲ್ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಜನಪ್ರಿಯ ಶಾಸಕರಾದ ಅಶೋಕ್ ಮನಗೂಳಿ ನೆರವೇರಿಸಿ ಮಾತನಾಡಿ ವಿರೋಧ ಪಕ್ಷದವರು ಎಷ್ಟು ಟೀಕೆ ಮಾಡುತ್ತಾರೆ ಅಷ್ಟು ನಾನು ಅವರನ್ನು ಅಭಿನಂದಿಸುತ್ತೇನೆ ನನಗೆ ನನ್ನ ತಪ್ಪನ್ನು ಎತ್ತಿ ತೋರಿಸುವುದರಿಂದ ನಾನು ಮತ್ತಷ್ಟು ಜಾಗೃತನಾಗಿ ತಪ್ಪುಗಳನ್ನು ತಿದ್ದಿಕೊಳ್ಳಲು ಅನುವು ಮಾಡಿಕೊಟ್ಟಿರುವುದಕ್ಕೆ ನಾನು ವಿರೋಧ ಪಕ್ಷದ ನಾಯಕರಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಆಲಮೇಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಸಾಧಿಕ್ ಸುಂಬಡ ಮಾತನಾಡಿ ನಮ್ಮ ನಾಯಕರಾದ ಅಶೋಕ್ ಮನಗೂಳಿ ಸೇಡಿನ ರಾಜಕೀಯ ಮಾಡುವವರಲ್ಲ ಏಕೆಂದರೆ ನೀವು ಹತ್ತು ವರ್ಷ ಶಾಸಕರಾಗಿ ನಿಮ್ಮದೇ ಸರ್ಕಾರ ಇದ್ದಾಗ ಆಲಮೇಲ ತಾಲೂಕನ್ನಾಗಿ ಮಾಡಲು ಸಾಧ್ಯವಾಗಲಿಲ್ಲ ಮಾನ್ಯ ದಿವಂಗತ ಎಂ ಸಿ ಮನಗೂಳಿ ಕಾಕಾ ಅವರು ಆಲಮೇಲ ಪಟ್ಟಣವನ್ನು ತಾಲೂಕು ಮಾಡಿದರು. ತೋಟಗಾರಿಕೆ ಕಾಲೇಜು ಮಂಜೂರು ಮಾಡಿದ್ದರು. ನಂತರ ತಮ್ಮ ಅಧಿಕಾರಾವಧಿಯಲ್ಲಿ ಮಂಜೂರಾದ ಕಾಲೇಜನ್ನು ತಡೆ ಹಿಡಿದಿದ್ದೀರಿ ಈಗ ಸಿಂದಗಿಯ ಶಾಸಕರಾದ ಅಶೋಕ್ ಮನಗೂಳಿ ತಂದೆಗೆ ತಕ್ಕ ಮಗನಾಗಿ ತೋಟಗಾರಿಕೆ ಕಾಲೇಜು ಮರು ಮಂಜೂರು ಮಾಡಿಸಿದ ಹೆಮ್ಮೆಯ ನಾಯಕರೆಂದು ಹೇಳಿದರು.
ಈ ಭೂಮಿ ಪೂಜೆ ಸಮಾರಂಭದಲ್ಲಿ ಕೆಡಿಪಿ ಸದಸ್ಯರಾದ ನೂರ್ ಅಹ್ಮದ್ ಅತ್ತಾರ್, ಎಪಿಎಂಸಿ ಅಧ್ಯಕ್ಷರಾದ ಬಸವರಾಜ್ ಬಾಗೇವಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕೊಳಾರಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಪ್ರಭು ವಾಲಿಕಾರ್, ಅಂಜುಮನ್ ಚೇರ್ಮನ್ ರಾದ ರಸುಲ್ ಸಾಬ್ ಆಲಮೇಲ, ಗ್ರಾಮ ಪಂಚಾಯತಿ ಸದಸ್ಯ ಡಿ ಕೆ ಬಡೆಗರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯಶವಂತರಾಯಗೌಡ ರೂಗಿ, ಹಾಜಿ,ಎಲ್,ಡಿ ಚಬನೂರ , ಮೈಬೂಬ್ ಸಾಬ್ ಆಲಮೇಲ, ಅಬ್ದುಲಗಪೂರ್ ಮ್ಯಾನಾಳ, ವಿಠಲ ಖ್ಯಾಡಗಿ, ರಾವುತ ಗೌಡ ಬಿರಾದರ್, ಚಾಮರಾಯ ಚೌವ್ಹಾಣ, ಮತ್ತು ಮಲಗಾಣ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
ವರದಿ. ಹಣಮಂತ ಚ. ಕಟಬರ್



















