ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಂಜುನಾಥ ಕಲಾಲ್ ರವರು ಸಮಾಜಮುಖಿ ಸೇವಕರು : ಗಾಲಿ ಜನಾರ್ಧನ ರೆಡ್ಡಿ

ಕೊಪ್ಪಳ/ ಆನೆಗೊಂದಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆದಿಶಕ್ತಿ ಶ್ರೀ ದುರ್ಗಾದೇವಿ ದೇವಾಲಯದ ಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ
ಆನೆಗೊಂದಿ ಗ್ರಾಮದ ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ಸಮಾಜ ಸೇವಕ ಮಂಜುನಾಥ ಕಲಾಲ್ ರರಿಂದ ಗುರುವಾರ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ರವರು ಮಂಜುನಾಥ ಕಲಾಲ್ ರವರ ಸಮಾಜಮುಖಿ ಸೇವೆ ಶ್ಲಾಘನೀಯವಾದದ್ದು, ಸಮರ್ಪಣಾ ಮನೋಭಾವ ಎನ್ನುವುದು ಇವರ ಜೀವನದ ಭಾಗವಾಗಿದ್ದು, ಅವಿರತವಾಗಿ ಕಳೆದ 7 ವರ್ಷಗಳಲ್ಲಿ 13 ಲಕ್ಷ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದ್ದಾರೆ. ಶಿಕ್ಷಣದ ಸೇವೆಗಾಗಿ ತಮ್ಮ ತನು, ಮನ, ಧನ ಅರ್ಪಿಸಿಕೊಂಡಿದ್ದಾರೆ.

ಮಕ್ಕಳು ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು ಮಾತ್ರವಲ್ಲದೇ ಪೋಷಕರದ್ದು ಕೂಡಾ ಆಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ನೋಟ್ ಪುಸ್ತಕದ ಪ್ರಾಯೋಜಕತ್ವ ನೀಡಿದ ಮಂಜುನಾಥ ಕಲಾಲ್ ಅವರನ್ನು ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆನೆಗೊಂದಿಯ ರಾಜವಂಶಸ್ಥರಾದ ಶ್ರೀಮತಿ ರತ್ನ, ಶ್ರೀ ಶ್ರೀಕೃಷ್ಣದೇವರಾಯಲು ಕಾರ್ಯಕ್ರಮದ ಆಯೋಜಕರಾದ ಮಂಜುನಾಥ ಕಲಾಲ್‌, ಗ್ರಾ.ಪಂ ಅಧ್ಯಕ್ಷರಾದ ಶ್ರೀ ಮತಿ ಹುಲಿಗೆಮ್ಮ ಹೊನ್ನಪ್ಪ ನಾಯಕ ಗ್ರಾ.ಪಂ ಉಪಾಧ್ಯಕ್ಷೆ ಪೂರ್ಣಿಮಾ, ಪತ್ರಕರ್ತರಾದ ನಿಂಗಜ್ಜ, ದೇಸಾಯಿ, ಮುಖಂಡರಾದ ಮನೋಹರ ಗೌಡ ಹೇರೂರು, ಡಿ ಕೆ ಅಗೋಲಿ, ಯಮನೂರು ಚೌಡ್ಕಿ, ಟಿ.ಜಿ ಬಾಬು, ಜಿಲಾನ್ ಪಾಷಾ, ಪಂಪಣ್ಣ ನಾಯಕ್, ದುರ್ಗಪ್ಪ ದಳಪತಿ, ಬಾಬು ರೆಡ್ಡಿ, ಬಾಲಪ್ಪ, ಶಿವಪ್ರಸಾದ್ ರೆಡ್ಡಿ, ಕಾಶಿನಾಥ, ಪ್ರಸಾದ್, ಲೋಕೇಶ್ ಹಾಗೂ ಗ್ರಾ. ಪಂ ಸದಸ್ಯರು ವೆಂಕಟೇಶ್, ರಾಜಶೇಖರ, ಶ್ರೀ ಕೃಷ್ಣ ಪಾಟೀಲ್, ಬಸವರಾಜ್ ಭೋವಿ, ಹನುಮೇಶ್ ಭೋವಿ, ನಿಂಗಜ್ಜ ಮಲ್ಲಾಪುರ, ಯಮನಪ್ಪ, ದೇವರಾಜ ನಾಯಕ, ಪರಶುರಾಮ್ ಪ್ಯಾಟೆ ಸೇರಿದಂತೆ ಹಲವು ವಿದ್ಯಾರ್ಥಿಗಳು, ಶಾಲಾ ಅಭಿವೃದ್ದಿ ಸಮಿತಿ, ಪಾಲಕರು, ಗ್ರಾಮದ ಹಿರಿಯ ಮುಖಂಡರು, ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.

ವರದಿ ಜಿಲಾನಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!