ಚಾಮರಾಜನಗರ/ ಕೊಳ್ಳೆಗಾಲ ತಾಲ್ಲೂಕಿನ ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾಮಗೆರೆ ಗ್ರಾಮದಲ್ಲಿ 2023/24 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿಯಲ್ಲಿ 10ಲಕ್ಷ.ರೂ ವೆಚ್ಚದ ಆದಿ ಜಾಂಬವ ಸಮುದಾಯ ಭವನದ ಅಡುಗೆ ಕೊಠಡಿ ಮುಂದುವರೆದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ನಂತರ ಮಾತನಾಡಿದ ಶಾಸಕರು ಕಾಮಗಾರಿಯ ಕೆಲಸ ಆದಷ್ಟು ಬೇಗ ಪ್ರಾರಂಭಗೊಂಡು ಹಾಗೆಯೇ ಒಳ್ಳೆಯ ಗುಣಮಟ್ಟ ಕಾಪಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಿ ಜನರ ಸೇವೆಗೆ ಸಿದ್ದ ಮಾಡಿಕೊಡಬೇಕೆಂದು ಅಭಿಯಂತರರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ನಿರ್ಮಿತಿ ಜೆ. ಇ ರವಿ ಹಾಗೂ ಮುಖಂಡರುಗಳಾದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಲಿಂಗರಾಜು, ರಾಜಣ್ಣ, ಶಿವು, ಚಿಕ್ಕಸ್ವಾಮಿ,ಸಿಂಗಾನಲ್ಲೂರು ರಾಜಣ್ಣ, ಚಿನ್ನವೆಂಕಟ್, ಗೋವಿಂದ, ಶ್ರೀರಂಗ, ಡಿಕೆ ರಾಜು, ಅಮೀನ್, ವೆಂಕಟೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್



















