ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರ್ಕಾರಿ ಪ್ರೌಢಶಾಲೆ ಕೋಡ್ಲಿ ಶಾಲೆಗೆ ಸ್ವಂತ ಜಮೀನು ನೀಡುವ ಕುರಿತು ಮನವಿ ಪತ್ರ ಸಲ್ಲಿಕೆ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಸರಕಾರಿ ಪ್ರೌಢ ಶಾಲೆಗೆ ಸ್ವಂತ ಜಮೀನು ಇರುವುದಿಲ್ಲ. ಈಗಿರುವ ಕಟ್ಟಡವು ಹಳೆಯದಾಗಿರುತ್ತದೆ‌ ಬಹಳ ವರ್ಷಗಳಿಂದ ಖಾಸಗಿ ಅವರ ಜಾಗದಲ್ಲಿ ಶಾಲೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಠಡಿಗಳು ಬೇಕಾಗುತ್ತವೆ ಮಕ್ಕಳಿಗೆ ಆಟ ಆಡುವುದಕ್ಕೆ ಆಟದ ಮೈದಾನ ಇರುವುದಿಲ್ಲ ಮತ್ತು ಶೌಚಾಲಯ ಕಟ್ಟುವುದಕ್ಕೆ ಜಾಗವು ಬೇಕಾಗುತ್ತದೆ. ಸುತ್ತಮುತ್ತಲಿನ ಊರಿನ ಗ್ರಾಮದ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಶಿಕ್ಷಣ ಪಡೆಯುವುದಕ್ಕೆ ಕೋಡ್ಲಿ ಸರ್ಕಾರಿ ಪ್ರೌಢಶಾಲೆಗೆ ಬರುತ್ತಾರೆ. ಶಾಲೆಯ ಸುತ್ತಮುತ್ತಲೂ ಮನೆಗಳು ನಿರ್ಮಾಣವಾಗಿರುತ್ತದೆ. ಆದ್ದರಿಂದ ಸರ್ಕಾರಿ ಪ್ರೌಢಶಾಲೆ ಕೋಡ್ಲಿ ಶಾಲೆಗೆ ಸರ್ಕಾರ ವತಿಯಿಂದ ಸ್ವಂತ ಜಾಗ ನೀಡಬೇಕೆಂದು ಪೃಥ್ವಿರಾಜ್ ಪಾಟೀಲ್ ತಹಶೀಲ್ದಾರ್ ಕಾಳಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಿ ಕೆ ಪಿ ಎಸ್ ನಿರ್ದೇಶಕರು ಶಿವಲಿಂಗಪ್ಪ ಸುಲೇಪೇಠ, ಖತಲಯ್ಯಗುತ್ತೇದಾರ, ಶಂಕರ ಶಿರೂರ, ದೇವೇಂದ್ರ ನರಬೋಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಲಿಂಗಪ್ಪ ಹಡಪದ ಹಾಜರಿದ್ದರು.

ವರದಿ ಚಂದ್ರಶೇಖರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!