ಯಾದಗಿರಿ/ಗುರುಮಠಕಲ್ : ಮೊಹರಂ ಪ್ರಯುಕ್ತ ಪಟ್ಟಣದಲ್ಲಿ ಸಾರ್ವಜನಿಕರ ಭದ್ರತೆ ಮತ್ತು ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಪಥ ಸಂಚಲನ (ಮಾರ್ಚ್ ಫಾಸ್ಟ್) ನಡೆಸಲಾಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರಣೇಶ ನೇತೃತ್ವ ವಹಿಸಿದ್ದರು, ಸೈಬರ್ ಅಪರಾಧ ಹಾಗೂ ಪ್ರಭಾರಿ ಡಿವೈಎಸ್ಪಿ ನಾಗರಾಜ, ಡಿಆರ್ ಡಿವೈಎಸ್ಪಿ ಭರತ ತಳವಾರ, ಪಿಐ ವೀರಣ್ಣ ದೊಡ್ಡಮನಿ, ಪಿಎಸ್ಐ ದಿನೇಶ್ ಸೇರಿದಂತೆ ಸಿಬ್ಬಂದಿಗಳು ಹಾಗೂ ಈ ಸಂಚಲನದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಭದ್ರತೆ ಹಾಗೂ ನಂಬಿಕೆಯನ್ನು ಉಂಟು ಮಾಡುವ ಕೆಲಸ ಮಾಡಿದರು.
ಪಥ ಸಂಚಲನದ ವೇಳೆ ಶಿಸ್ತಿನ ಪ್ರದರ್ಶನದ ಜೊತೆಗೆ, ಯಾವುದೇ ಅವಾಂತರ ಘಟನೆಗಳನ್ನು ತಡೆಗಟ್ಟುವ ಸಂದೇಶವನ್ನೂ ನೀಡಲಾಯಿತು.
ವರದಿ: ಜಗದೀಶ್ ಕುಮಾರ್ ಭೂಮಾ



















