ಬಳ್ಳಾರಿ/ ಕಂಪ್ಲಿ : ತುಂಗಭದ್ರಾ ಜಲಾಶಯದ ಹೆಚ್ಚಿನ ನೀರನ್ನು ನದಿಗೆ ಬಿಡುವ ಬದಲು ಕಾಲುವೇಗೆ ಜು.10ರಿಂದ ಎಚ್ಎಲ್ಸಿ ಕಾಲುವೆ ನೀರು ಬಿಟ್ಟು, ಡಿ.3, ಡಿ6, ಡಿ.7ಗೆ ನೀರು ಹರಿಸಬೇಕೆಂದು ರೈತ ಮುಖಂಡ ಶ್ರೀನಾಥ ಒತ್ತಾಯಿಸಿದರು ತಾಲೂಕಿನ ಸುಗ್ಗೇನಹಳ್ಳಿ ಗ್ರಾ. ಪಂ ವ್ಯಾಪ್ತಿಯ ಶ್ರೀರಾಮರಂಗಾಪುರ (ಕೊಟ್ಟಾಲ್) ಗ್ರಾಮದ ರೈತರು ಶ್ರೀಕೋದಂಡರಾಮ ದೇವಸ್ಥಾನ ಬಳಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಬಾರಿ ಸರಿಯಾದ ಮಳೆ ಬೆಳೆ ಇಲ್ಲದೇ ಮತ್ತು ಬೆಂಬಲ ಬೆಲೆ ದೊರಕದ ಹಿನ್ನಲೆ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ ಈವಾಗ ಮಳೆಯಾಗುತ್ತಿಲ್ಲ ಈ ಬಾರಿಯಾದರೂ ಎರಡು ಬೆಳೆಗೆ ನೀರು ಸಿಗಬಹುದು ಎನ್ನುವಷ್ಟರಲ್ಲಿ ಟಿಬಿ ಬೋರ್ಡ್ನವರು ಹೊಸ ಕ್ರಸ್ಟಗೇಟ್ ಅಳವಡಿಸುವ ಹಿನ್ನಲೆ ಮುಂಗಾರು ಬೆಳೆಗೆ ಮಾತ್ರ ನೀರು ಹರಿಸಲು ನಿರ್ಧಸಿದ್ದಾರೆ. ಆದರೆ ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿ ನದಿಗೆ ಹರಿಸಿ ಪೋಲು ಮಾಡಲಾಗುತ್ತಿದೆ. ಅದೇ ನೀರನ್ನು ಕಾಲುವೆಗಳಿಗೆ ಹರಿಸಿದರೆ ಮೊದಲ ಬೆಳೆಯನ್ನು ಆದಷ್ಟು ಬೇಗ ತೆಗೆದುಕೊಳ್ಳಬಹುದು. ಎಚ್ಎಲ್ಸಿ ಕಾಲುವೆ ಆಶ್ರಿತ ಡಿ3 ವ್ಯಾಪ್ತಿಯಲ್ಲಿ ಬರುವ ಶ್ರೀರಾಮರಂಗಾಪುರ, ಸುಗ್ಗೇನಹಳ್ಳಿ, ದರೋಜಿ, ಮಾದಾಪುರ, ಹೊನ್ನಳ್ಳಿ, ಮಾವಿನಹಳ್ಳಿ, ಗೋನಾಳ್, ಹಂಪಾದೇವಹಳ್ಳಿ ಭಾಗಕ್ಕೆ ಹಾಗೂ ಡಿ೬ನ ಏಳುಬೆಂಚಿ, ಮಾದಾಪುರ, ಹೊನ್ನಳ್ಳಿ ಹಾಗೂ ಡಿ7ನ ಬೋರಿಂಗ್ ಕ್ಯಾಂಪ್, ಸುಗ್ಗೇನಹಳ್ಳಿ, ಶ್ರೀರಾಮರಂಗಾಪುರ ಪ್ರದೇಶದ ರೈತರ ಜಮೀನಿಗಳಿಗೆ ನೀರು ಹರಿಯುತ್ತದೆ. ಆದರೆ, ಕೆಳ ಭಾಗದಲ್ಲಿರುವ ಈ ರೈತರಿಗೆ ಜಮೀನಿಗಳಿಗೆ ತಲುಪಬೇಕಾಗಿದೆ. ಆದ್ದರಿಂದ ಟಿಬಿ ಬೋರ್ಡ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಬಗ್ಗೆ ಹೆಚ್ಚಿನ ಕಾಳಜಿವಹಿಸಿ, ನದಿಗೆ ನೀರು ಪೋಲು ಮಾಡುವುದನ್ನು ಸ್ಥಗಿತಗೊಳಿಸಿ, ಎಚ್ಎಲ್ಸಿ ಕಾಲುವೆ ಮೂಲಕ ಕೆಳ ಹಂತದ ರೈತರ ಹೊಲಗದ್ದೆಗಳಿಗೆ ನೀರು ಹರಿಸಿ, ಮೊದಲ ಬೆಳೆ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಭಾಸ್ಕರ್, ರಾಮಾಂಜಿನಿ, ರಾಧಾಕೃಷ್ಣ, ಎಂ. ಮಂಜುನಾಥ, ಸಾಯಿ, ಎರ್ರೆಪ್ಪ, ಪಿ.ಶ್ರೀನಿವಾಸಲು, ತಾಳೂರು ಶ್ರೀನಿವಾಸಲು ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















