ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ ೧೦ ರಂದು ಹಡಪದ ಅಪ್ಪಣ್ಣ ನವರ 891 ನೇ ಜಯಂತಿ ಆಚರಣೆ : ಬೆಂಗಳೂರು ಚಲೋ


‌ ಕಲಬುರಗಿ: 12 ನೇ ಶತಮಾನದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾದ ನಿಜಸುಖಿ ಹಡಪದ ಅಪ್ಪಣ್ಣ ನವರ 891 ನೇ ರಾಜ್ಯ ಮಟ್ಟದ ಜಯಂತೋತ್ಸವ ಕಾರ್ಯಕ್ರಮ ಇದೇ ಜುಲೈ 10 ಗುರುವಾರ ದಿನದಂದು ,ಬೆಂಗಳೂರು ನಗರದ ಜೆ.ಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5ಗಂಟೆಯಿಂದ 6ಗಂಟೆಯ ವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಭಾಂಧವರು ಜುಲೈ 10 ರಂದೇ ಬೆಂಗಳೂರು ಚಲೋದಲ್ಲಿ ಭಾಗವಹಿಸಬೇಕು ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಮನವಿ ಮಾಡಿದ್ದಾರೆ. ದಶಕಗಳಿಂದ ಎಲ್ಲಾ ರಾಜಕೀಯ ಪಕ್ಷಗಳಿಂದ ಹಾಗೂ ಸರ್ಕಾರಗಳಿಂದ ಈಗಾಗಲೇ ರಾಜ್ಯದ ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ ಜೀ ಅವರು ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿ ಆದೇಶ ಹೊರಡಿಸಿದರು, ಈ ನಿಗಮವನ್ನು ಈಗಿನ ಕಾಂಗ್ರೆಸ್ ಸರ್ಕಾರ ಪೂರ್ಣ ಪ್ರಮಾಣದಲ್ಲಿ ‘ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು ,ಈ ನಿಗಮಕ್ಕೆ 100 ಕೋಟಿ ರೂಪಾಯಿಗಳು ಮೀಸಲಿಡಬೇಕು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಇರುವ ಬಸವಣ್ಣನವರ ಅರಿವಿನ ಮನೆ (ಗವಿ)ಯ ಪಕ್ಕದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಗವಿಯನ್ನು ಬಿ ಕೆ ಡಿ ಬಿ ಗೆ ಸೇರ್ಪಡೆ ಮಾಡಿ ಅಭಿವೃದ್ಧಿ ಪಡಿಸಬೇಕು ಮತ್ತು ಬಸವನ ಬಾಗೇವಾಡಿ ತಾಲ್ಲೂಕಿನ ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ಮಸಬಿನಾಳ ಹಾಗೂ ತಾಯಿ ಹಡಪದ ಲಿಂಗಮ್ಮನವರ ಜನ್ಮಸ್ಥಳ ದೇಗಿನಾಳವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆ ಮಾಡಿ ಅಭಿವೃದ್ಧಿ ಪಡಿಸಬೇಕು ಕೂಡಲಸಂಗಮ ಪಕ್ಕದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ಪೀಠದ ಕಟ್ಟಡ ನಿರ್ಮಾಣ (ಕಾಮಗಾರಿಗೆ) 5 ಕೋಟಿ ರೂಪಾಯಿಗಳು ಮೀಸಲಿಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗುವುದು ಮತ್ತು ಇದೇ ವೇಳೆ ರಾಜ್ಯದಲ್ಲಿ ವಿವಿಧ ಉಪನಾಮಗಳಿಂದ ಕರೆಯಲ್ಪಡುವ ಹಡಪದ ಅಪ್ಪಣ್ಣ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ 2ಎ ಗೊಂದಲ ನಿವಾರಿಸಿ ಏಕರೂಪದ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಮತ್ತು ಹಡಪದ ಅಪ್ಪಣ್ಣ ಸಮಾಜಕ್ಕೆ 2ಎ ದಲ್ಲಿಯೇ ಒಳ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಲಾಗುವುದು. ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕವಾಗಿ ಕಡೆಗಡಣೆಗೆ ಒಳಗಾಗಿರುವ ರಾಜ್ಯದ ಸುಮಾರು 13 ರಿಂದ 14 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಅತ್ಯಂತ ಹಿಂದುಳಿದಿರುವ ಹಡಪದ ಸಮುದಾಯ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿ ಬಾರಿ ಸರ್ಕಾರಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಮನವಿಯನ್ನು ವಿವಿಧ ವೇದಿಕೆಗಳ ಮೂಲಕ ನೀಡಿದರೂ ಸಹ ಇದುವರೆಗೂ ಯಾವುದೇ ರೀತಿಯಲ್ಲಿ ಅನುಕೂಲಕರವಾದ ನಿರ್ಣಯ ಕೈಗೂಂಡಿಲ್ಲ, ಹಲವು ವರ್ಷಗಳ ನಮ್ಮ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಸಮಾಜದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಅನ್ನಧಾನಿ ಭಾರತಿ ಅಪ್ಪಣ್ಣ ಸ್ವಾಮಿಜೀಗಳ ಸಾನ್ನಿಧ್ಯದಲ್ಲಿ ಮತ್ತು ರಾಜ್ಯದ ಸಮಸ್ತ ಹಡಪದ ಅಪ್ಪಣ್ಣ ಸಮಾಜದ ನೇತೃತ್ವದಲ್ಲಿ ‘ಹಡಪದ ವಂಶಸ್ಥರ (ಕಾಯಕ) ಬಂಧುಗಳ ಮತ್ತು ಮಹಿಳಾ ತಾಯಂದಿರ ಶಕ್ತಿ ಪ್ರದರ್ಶನ ಇದೇ ಜುಲೈ 10 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಶರಣ ಹಡಪದ ಅಪ್ಪಣ್ಣ ನವರ 891ನೇ ಜಯಂತೋತ್ಸವ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಸಮಾಜದ ಬಂಧುಗಳು ಶಕ್ತಿ ಪ್ರದರ್ಶನ ಮತ್ತು ಜಾಗೃತಿ ಸಮಾವೇಶ ಯಶಸ್ವಿಯಾಗಿ ಮಾಡಲು ತಾವೆಲ್ಲರೂ ಕಾರಣೀಕರ್ತರಾಗಿ ಮತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಸಿ.ಎಂ. ಶ್ರೀ ಸಿದ್ರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಶ್ರೀ ಡಿ‌ .ಕೆ ಶಿವಕುಮಾರ್ ಅವರು ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಚಿವರು ಶ್ರೀ ಶಿವರಾಜ್ ತಂಗಡಗಿ, ಹಾಗೂ ಅನೇಕ ಕ್ಯಾಬಿನೆಟ್ ದರ್ಜೆಯ ಸಚಿವರು, ಶಾಸಕರು ಮತ್ತು ಕೇಂದ್ರ ಸಂಸದರು, ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ಹಾಗಾಗಿ ಇಡೀ ಕರ್ನಾಟಕದ ರಾಜ್ಯದ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ಬಂಧುಗಳು.ಮತ್ತು ಮಹಿಳಾ ತಾಯಂದಿರು, ಯುವಕ ಮಿತ್ರರು ಹಾಗೂ ಬೆಂಗಳೂರು ನಗರದಲ್ಲಿ ಇರುವ ನಮ್ಮ ಸಮಾಜದ ಕುಲ ಭಾಂಧವರು, ನೌಕರಸ್ಥರು, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಸಮಾಜದ ಹತ್ತು ಹಲವು ಬೇಡಿಕೆಯನ್ನು ರಾಜ್ಯದ ಸಿ.ಎಂ. ಸಿದ್ರಾಮಯ್ಯನವರ ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಈ ಸಮಾಜಕ್ಕೆ ಅಭಿವೃದ್ಧಿ ಪಡಿಸುವ ಕಾರ್ಯ ಮಾಡಲಿ ಎಂದು ಸ್ವಾಮಿಜೀಗಳು ಸಮಾಜದ ಮುಖಂಡರ ಹಾಗೂ ರಾಜ್ಯದ ಸಮಸ್ತ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಜನತೆಯ ಪರವಾಗಿ ಪ್ರಸ್ತಾಪವನ್ನು ಮುಂದಿಡಬೇಕು ಈ ರಾಜ್ಯ ಮಟ್ಟದ ಜಯಂತೋತ್ಸವ ಯಶಸ್ವಿಯಾಗಿ ಮಾಡಲು ತಾವೆಲ್ಲರೂ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಎಂದು ತಮ್ಮಲ್ಲಿ ಮನವಿ ಮಾಡಿದರು. ಇದೇ ಸಂಧರ್ಭದಲ್ಲಿ ರಾಜ್ಯದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಸಿ ಹಡಪದ ಹಳ್ಳಿ ಶಹಾಬಾದ. ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಮತ್ತು ಕಲಬುರಗಿ ಜಿಲ್ಲಾಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ, ಮತ್ತು ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು ಭಗವಂತ ಹಡಪದ ಹೂನ್ನಕಿರಣಗಿ, ಹಾಗು ಜಿಲ್ಲಾ ಪ್ರದಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಮತ್ತು ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ್ಣ ಬಟಗೇರಾ, ಹಾಗೂ ಮಹಾತೇಶ ಇಸ್ಲಾಂಪೂರೆ. ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಮತ್ತು ಆನಂದ ಖೇಳಗಿ, ಜಿಲ್ಲಾ ಸಹ ಕಾರ್ಯದರ್ಶಿ ಮಹಾದೇವ ರಾವೂರ, ನಿಂಗಣ್ಣ ಯಾತನೂರ, ಮತ್ತು ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಬಗದುರಿ, ಮತ್ತು ಮಲ್ಲಿಕಾರ್ಜುನ ಹಡಪದ ಬನ್ನೂರ, ಹಾಗೂ ಕಲಬುರಗಿ ಜಿಲ್ಲೆಯ ಖಂಜಾಚಿ ಶಿವಾನಂದ ಬಬಲಾದ, ಮತ್ತು ಕಲಬುರಗಿ ಜಿಲ್ಲೆಯ ನಗರಘಟಕ ಅಧ್ಯಕ್ಷರು ಮಲ್ಲಿಕಾರ್ಜುನ ಹಡಪದ ಸಾವಳಗಿ, ಹಾಗೂ ಕಲಬುರಗಿ ತಾಲ್ಲೂಕು ಅದ್ಯಕ್ಷ. ಚಂದ್ರಶೇಖರ ಹಡಪದ ತೊನಸನಹಳ್ಳಿ, ವಿನೋದ ಅಂಬಲಗಾ ಸೇರಿದಂತೆ ಈ ಜಯಂತಿಗೆ ಸಮಾಜದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರು ನಗರದ ಕಡೆಗೆ ಪ್ರಯಾಣ ಬೆಳಸಬೇಕು ಎಂದು ಮನವಿ ಮಾಡಲಾಯಿತು .

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!