ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಸರಕಾರಿ ಪ್ರೌಢ ಶಾಲೆಗೆ ಸ್ವಂತ ಜಮೀನು ಇರುವುದಿಲ್ಲ. ಈಗಿರುವ ಕಟ್ಟಡವು ಹಳೆಯದಾಗಿರುತ್ತದೆ. ಬಹಳ ವರ್ಷಗಳಿಂದ ಖಾಸಗಿಯವರ ಜಾಗದಲ್ಲಿ ಶಾಲೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಠಡಿಗಳು ಬೇಕಾಗುತ್ತವೆ, ಮಕ್ಕಳಿಗೆ ಆಟ ಆಡುವುದಕ್ಕೆ ಆಟದ ಮೈದಾನ ಇರುವುದಿಲ್ಲ ಮತ್ತು ಶೌಚಾಲಯ ಕಟ್ಟುವುದಕ್ಕೆ ಜಾಗವೂ ಬೇಕಾಗುತ್ತದೆ. ಸುತ್ತಮುತ್ತಲಿನ ಊರಿನ ಗ್ರಾಮದ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಪಡೆಯುವುದಕ್ಕೆ ಕೋಡ್ಲಿ ಸರ್ಕಾರಿ ಪ್ರೌಢಶಾಲೆಗೆ ಬರುತ್ತಾರೆ. ಶಾಲೆಯ ಸುತ್ತಮುತ್ತಲೂ ಮನೆಗಳು ನಿರ್ಮಾಣವಾಗಿರುತ್ತದೆ. ಆದ್ದರಿಂದ ಸರ್ಕಾರಿ ಪ್ರೌಢಶಾಲೆ ಕೋಡ್ಲಿ ಶಾಲೆಗೆ ಸರ್ಕಾರ ವತಿಯಿಂದ ಸ್ವಂತ ಜಾಗ ನೀಡಬೇಕೆಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಿಂದ್ರಪ್ಪ ಕೊಂಕಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಿ ಕೆ ಪಿ ಎಸ್ ನಿರ್ದೇಶಕರು ಶಿವಲಿಂಗಪ್ಪ ಸುಲೇಪೇಠ, ಖತಲಯ್ಯ ಗುತ್ತೇದಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಪ್ಪ ಚಿಂತಕುಂಟಾ ಹಾಜರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















