ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಲ್ಲಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ.
ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿ ಕೇರಳ ಮೂಲದ ವ್ಯಕ್ತಿ ಗುಂಡ್ಲುಪೇಟೆ ಕಡೆಯಿಂದ ಮೈಸೂರಿನ ಕಡೆ ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಕೇರಳ ಮೂಲದ ಲಾರಿ ಪ್ಲೈಹುಡ್ ಶೀಟ್ ತುಂಬಿದ ಲಾರಿ KL38 X3949 ನಂಬರ್ ನ ಲಾರಿ ಮೈಸೂರು ಕಡೆಗೆ ಹೋಗುತಿದ್ದು ಹಿಂಬದಿಯಿಂದ ಬಂದ ಕೇರಳ ಮೂಲದ ಬೈಕ್ KL40 H7806 ಬೈಕ್ ನ ಕೇರಳ ಮೂಲದ ವ್ಯಕ್ತಿಯು ತುಂಬಾ ಪಾನ ಮತ್ತನಾಗಿ ಲಾರಿ ಹಿಂಬದಿಯ ಬಂಪರ್ ಗೆ ಡಿಕ್ಕಿ ಹೊಡೆದು ಸಾವನಪ್ಪಿರುತ್ತಾನೆ. ಈ ಘಟನೆ ಸುಮಾರು ರಾತ್ರಿ 10 ಗಂಟೆ ಸಮಯದಲ್ಲಿ ನಡೆದಿದೆ. ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ಗುಂಡ್ಲುಪೇಟೆ ಕುಮಾರ್



















