ಬಳ್ಳಾರಿ/ ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಮದಲ್ಲಿ ದೇವರುಗಳು ಸಾವಿರಾರು ಭಕ್ತಾದಿಗಳ ಮುಂದೆ ಅಲಾಯಿ ಬಿಲಾಯಿ ನೀಡಲಾಯಿತು.
ಹಲಗೆ ತಮಟೆ ಸದ್ದಿನೊಂದಿಗೆ ಮೊಹರಂ ಹಬ್ಬ ಅದ್ದೂರಿಯಾಗಿ ಜರುಗಿತು.
ಎಲ್ಲೆಡೆ ಹಬ್ಬದ ವಾತಾವರಣ ನೋಡುಗರನ್ನು ಕಣ್ ಮನ ಸೆಳೆಯುವಂತಿತ್ತು.
ಸುತ್ತಮುತ್ತಲಿನ ಭಕ್ತಿರು ಭಕ್ತಿಯಿಂದ ಉತ್ತತ್ತಿ, ಬೆಲ್ಲ, ಸಕ್ಕರೆ, ಹೂ ಮಾಲೆ ಅರ್ಪಿಸಿ ಬಳಿಕ ದೀಡ್ ನಮಸ್ಕಾರ ಸಲ್ಲಿಸಿ ಆರೋಗ್ಯ, ಸಂಪತ್ತು, ಮಳೆ ಬೆಳೆ ಚೆನ್ನಾಗಿ ಲಭಿಸಲಿ ಎಂದು ಅಲೈ ದೇವರಲ್ಲಿ ಪ್ರಾರ್ಥಿಸಿಕೊಂಡರು. ಶಾಂತಿ, ಸಹನೆ, ಸಂಭ್ರಮ ಸಡಗರದಿಂದ ಮೊಹರಂ ಹಬ್ಬವನ್ನು ಅತ್ಯಂತ ಭಕ್ತಿಭಾವದಿಂದ ಒಟ್ಟು ಐದು ದಿನಗಳ ಕಾಲ ದೇವರುಗಳನ್ನು ಅಲೈ ದೇವರನ್ನು ಡೋಲಿಯನ್ನು ಕೂಡಿಸಿ ದಿನ ನಿತ್ಯ ಅಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಹುಲಿ ವೇಷಗಾರರು, ಅಚ್ಚೊಳ್ಳಿ ಸೇರಿದಂತೆ ವಿವಿಧ ಕಲಾವಿದರು ಭಕ್ತಿಭಾವದಿಂದ ಕುಣಿದು ಕುಪ್ಪಳಿಸಿದರು. ಅಲೈ ದೇವರುಗಳನ್ನು (ದಫನ್) ಗೂ ಮುನ್ನ ಎಲ್ಲಾ ದೇವರುಗಳನ್ನು ವಿವಿಧ ವಾದ್ಯ ಮೇಳದೊಂದಿಗೆ ಶ್ರದ್ದಾ ಭಕ್ತಿಯಿಂದ ಮೆರವಣಿಗೆ ನಡೆಸಿ. ಉತ್ತತ್ತಿ, ಸಕ್ಕರೆ ಅರ್ಪಿಸಿದ ಬಳಿಕ ರಾತ್ರಿ ಅಲೈ ದೇವರನ್ನು ಕಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















