
ಮೊಹರಂ ಹಬ್ಬದಂದು ವಿಶೇಷ ಮೊಹರಂ ಹಾಡುಗಳನ್ನು ಆಡುವ ಮೂಲಕ ಸರಿ ಸುಮಾರು ಇಂದಿಗೆ 40 ವರ್ಷಗಳೇ ಕಳೆದಿವೆ.
ಕೋಟೆಗಾರವಾಡ ಮೊಹರಂ ಹಾಡುಗರು ಬರ್ಚಿ ಯಲ್ಲಮ್ಮ ( ಚಟ್ಟಣಿ )ಗುಡಿಯ ಮುಂದೆ ವಿಶೇಷವದ ಬೆಳ್ಳಿ ಖಡ್ಗವನ್ನು ಇಟ್ಟು ಅದನ್ನು ಯಾರು ಮೊಹರಂ ಸವಾಲು ಹಾಡುಗಳನ್ನು ಹಾಡಿ ವಿಜೇತರಾಗುತ್ತಾರೋ ಅವರಿಗೆ ಆ ಕೈ ಖಡ್ಗವನ್ನು ನೀಡುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷಕ್ಕೆ 40 ವರ್ಷಗಳಿಂದ ಕೈ ಖಡ್ಗವನ್ನು ಹಾಡಿ 37 ವರ್ಷದಿಂದ ತರುತಿದ್ದೇವೆ, ಎಂದು ಮೊಹರಂ ಹಾಡುಗಾರರಾದ, ಮೋನಪ್ಪ ಮುನೇಪ್ಪಾನೋರ್ ಹಾಗೂ ಬಸಪ್ಪ ಗಿರಿಪ್ಪನೋರ್ ರವರು ಹೇಳಿದರು.
ಅದೇ ರೀತಿ ವಿಜೇತರಿಗೆ ನಗರದ ಸಾರ್ವಜನಿಕರು ಸೇರಿಕೊಂಡು ವಿಜೃಂಭಣೆಯಿಂದ , ಚಕ್ಕರಕಟ್ಟ, ಮೈಲಾಪುರ್ ಅಗಸಿ, ಕೋಲಿವಾಡದ, ಮೂಲಕ ಕೋಟೆಗಾರವಾಡದ ವರೆಗೆ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ತಾಯಪ್ಪ ಭಂಡಾರಿ, ರಾಹುಲ್ ಕೊಲ್ಲೂರಕರ್, ಮಲ್ಲಪ್ಪ ಕೌಳೂರ್, ಗಂಗಪ್ಪ ಮೊಳ್ಳಳ್ಳಿ,ಮೌನೇಶ್ ಗಿರಿಪ್ಪನೋರ್, ರಮೇಶ್ ಹಳ್ಳಿ, ರಮೇಶ್ ಕೊಲ್ಲೂರ್, ಬಾಲಪ್ಪ ಕೂಲೂರ್, ಬಸವ ಅರಿಕೇರಿ, ಸ.ಸೈದಪ್ಪ ಕೂಲೂರ್, ರಮೇಶ್ ಕ್ಯಾತ್ನಾಳ್, ಆಂಜನೇಯ ಭಂಡಾರಿ, ರಮೇಶ್ ಗಣಪುರ, ಮಶಪ್ಪ ಅರಿಕೇರಿ,ಹಣಮಂತ ಕೊಲ್ಲೂರ್ ಸೇರಿದಂತೆ ಕೋಟೆಗಾರವಾಡ ಗ್ರಾಮಸ್ಥರು ಭಾಗವಹಿಸಿದ್ದರು.
- ಕರುನಾಡ ಕಂದ



















